ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರಿಗೆ ವಯಾಗ್ರ!

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಲಿಬಿಯಾ ನಾಯಕ ಮುಅಮ್ಮರ್ ಗಡಾಫಿಯು ತನ್ನ ಸೈನಿಕರಿಗೆ ಕಾಮಕ್ರೀಡೆ ಉತ್ತೇಜಿಸುವ ಔಷಧಿ ಗಳನ್ನು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಲು ಆದೇಶಿಸು ತ್ತಿದ್ದ ಎಂದು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಮುಖ್ಯ ಪ್ರಾಸಿಕ್ಯೂಟರ್ ಹೇಳಿದ್ದಾರೆ.

ಲಿಬಿಯಾ ಸರ್ಕಾರವು ತನ್ನ ಸೈನಿಕರಿಗಾಗಿ ವಯಾಗ್ರ ಮಾದ ರಿಯ ಔಷಧ ಖರೀದಿಸುತ್ತ್ದ್ದಿದುದನ್ನು ಸಾಕ್ಷಿಗಳು ದೃಢಪಡಿಸಿದ್ದಾರೆ ಎಂದು ಲೂಯಿಸ್ ಮೊರೆನೊ- ಒಕ್ಯಾಂಪೊ ಹೇಳಿದ್ದಾರೆ ಎಂದು          `ಸ್ಕೈ ನ್ಯೂಸ್~ ವರದಿ ಮಾಡಿದೆ. ಮಾನವ ವಿರೋಧಿ ಅಪರಾಧ ಗಳಿಗಾಗಿ ಗಡಾಫಿ ಮತ್ತು ಆತನ ಪುತ್ರ ಸೈಫ್ ಅಲ್ ಇಸ್ಲಾಂ ವಿರುದ್ಧ ವಾರೆಂಟ್ ಹೊರಡಿಸಬೇಕು ಎಂದು ಮುಖ್ಯ ಪ್ರಾಸಿಕ್ಯೂಟರ್ ಈಗಾಗಲೇ ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿಗಳು ಈ ಮನವಿಯನ್ನು ಪರಿಶೀಲಿಸುತ್ತಿದ್ದಾರೆ. ಲಿಬಿಯಾದ ನಾಯಕನ ವಿರುದ್ಧ ಈಗ ಹೊಸದಾಗಿ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಬಹುದು ಎಂದೂ ಪ್ರಾಸಿಕ್ಯೂ ಟರ್ ತಿಳಿಸಿದ್ದಾರೆ. `ಜನಸಂಖ್ಯೆ ನಿಯಂತ್ರಣಕ್ಕೆ ಈ ಕ್ರಮ ಅಲ್ಲ. ಅತ್ಯಾ ಚಾರ ದಬ್ಬಾಳಿಕೆಯ ಹೊಸ ಕ್ರಮ ಆಗಿತ್ತು. ಆ ಮೂಲಕ ಶಿಕ್ಷೆ ನೀಡಲು ಆತ ನಿರ್ಧರಿಸಿದ್ದ~ ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT