ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಫ್ ಆಲಿಖಾನ್ ವಿರುದ್ಧ ಆರೋಪ ಪಟ್ಟಿ

Last Updated 21 ಡಿಸೆಂಬರ್ 2012, 9:27 IST
ಅಕ್ಷರ ಗಾತ್ರ
ಮುಂಬೈ (ಪಿಟಿಐ): ತಾಜ್ ಐಷಾರಾಮಿ ಹೋಟೆಲ್‌ನಲ್ಲಿ ಕಳೆದ ಹತ್ತು ತಿಂಗಳ ಹಿಂದೆ ನಡೆದಿದ್ದ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೈಫ್ ಆಲಿಖಾನ್ ವಿರುದ್ಧ ಮುಂಬೈ ಪೊಲೀಸರು ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಸೈಫ್ ಆಲಿ ಖಾನ್ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮುಂಬೈ ವಲಯ ಪೊಲೀಸ್ ಅಧಿಕಾರಿ ರವೀಂದ್ರ ಸಿಸ್ವೇ ತಿಳಿಸಿದ್ದಾರೆ. 

ಕಳೆದ ಫೆಬ್ರುವರಿ 22ರಂದು ಸೈಫ್ ಆಲಿಖಾನ್ ಮತ್ತು ದಕ್ಷಿಣಾ ಆಫ್ರಿಕಾದ ಉದ್ಯಮಿ ಇಕ್ಬಾಲ್ ನಡುವೆ ತಾಜ್ ಹೋಟೆಲ್‌ನಲ್ಲಿ ಜಗಳ ನಡೆದಿತ್ತು. ಘಟನೆಯಲ್ಲಿ ಇಕ್ಬಾಲ್ ಮೇಲೆ ಸೈಫ್ ಆಲಿಖಾನ್ ಮತ್ತು ಆತನ ಮೂವರು ಸ್ನೇಹಿತರು ಹಲ್ಲೆ ನಡೆಸಿದ್ದರು. ಈ ಸಂಬಂಧ ಇಕ್ಬಾಲ್ ಮುಂಬೈನ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT