ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಮಾಲಿಯಾ: ಶಿಕ್ಷಕನಿಗೆ ಉಪಪ್ರಧಾನಿ ಪಟ್ಟ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಉತ್ತರ ಲಂಡನ್‌ನ ಬ್ರೆಂಟ್ ಪ್ರದೇಶದ ನ್ಯೂಮನ್ ಕ್ಯಾಥೋಲಿಕ್ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಈಗ ಸೊಮಾಲಿಯಾದ ಉಪ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಮಹಮ್ಮದ್ ಇಬ್ರಾಹಿಂ ಹೆಸರಿನ 64 ವರ್ಷದ ಈ ಶಿಕ್ಷಕರು ಬೇಸಿಗೆ ರಜೆಗೆಂದು ಸ್ವದೇಶಕ್ಕೆ ಹೋದವರು ಮರಳಿ ಕೆಲಸಕ್ಕೆ ಹಾಜರಾಗಿರಲಿಲ್ಲ.

ಈ ಬಗ್ಗೆ ಕಾಲೇಜಿನ ಮುಖ್ಯ ಶಿಕ್ಷಕ ರಿಚರ್ಡ್ ಕೋಲ್ಕಾ ಅವರು ಇಬ್ರಾಹಿಂ ಹೆಸರನ್ನು ಅಂತರ್ಜಾಲದ ಗೂಗಲ್ ತಾಣದಲ್ಲಿ ತಡಕಾಡಿದಾಗ ಅವರು ಸೊಮಾಲಿಯಾದ ಉಪ ಪ್ರಧಾನಿ ಪಟ್ಟಕ್ಕೆ ನಿಯೋಜಿತರಾಗಿರುವುದು ಸೊಮಾಲಿಯಾದ ಸರ್ಕಾರಿ ದಾಖಲೆಗಳಲ್ಲಿ ಕಂಡು ಬಂದಿತು ಎಂದು `ಡೈಲಿ ಮೇಲ್~ ವರದಿ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT