ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋದರಿ ಸೋದರರ ಸಿದ್ಧಗಂಗಾ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಿದ್ಧಗಂಗಾ ಮಠದಲ್ಲಿ ಅಕ್ಕ-ತಮ್ಮ ಇಬ್ಬರು ಜಗಳ ಮಾಡುತ್ತಿದ್ದರು. ಅವರನ್ನು ಮಾತನಾಡಿಸಿದಾಗ ತಿಳಿದ ಹೃದಯಸ್ಪರ್ಶಿ ವಿಚಾರವನ್ನು ಕತೆಯನ್ನಾಗಿಸಿ `ಸಿದ್ಧಗಂಗಾ~ ಸಿನಿಮಾ ರೂಪಿಸಿದ್ದಾರಂತೆ ನಿರ್ದೇಶಕ ಜಿ.ಮೂರ್ತಿ. ಅವರು ಈ ಮೊದಲು `ಜ್ಞಾನಜ್ಯೋತಿ ಸಿದ್ಧೇಶ್ವರ~ ಸಿನಿಮಾ ನಿರ್ದೇಶಿಸಿದ್ದವರು. ಅದೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಈ ಘಟನೆಯನ್ನು ನೆನಪಿಸಿಕೊಂಡ ಮೂರ್ತಿ, `ಅದು ತಮಗೆ ಜ್ಞಾನ ಬಂದ ಕಾಲ~ ಎಂದು ನುಡಿದರು.

ಮೂಲತಃ ಕಲಾ ನಿರ್ದೇಶಕರಾದ ಜಿ.ಮೂರ್ತಿ ಅವರು `ಸಿದ್ಧಗಂಗಾ~ ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಕಲಾ ನಿರ್ದೇಶನವೂ ಸೇರಿದೆ. ಸಿದ್ಧ ಮತ್ತು ಗಂಗಾ ಎಂಬ ಹೆಸರಿನ ಅಕ್ಕ-ತಮ್ಮನ ಕತೆಯನ್ನು ಸಿನಿಮಾ ಮಾಡಿರುವ ಅವರಿಗೆ ಸಿನಿಮಾದಲ್ಲಿ ಅಕ್ಕ ಮಾಡುವ ತ್ಯಾಗ ಬಹುದೊಡ್ಡದು ಎನಿಸಿದೆ.

ತಮ್ಮ ಕತೆಗೆ ಸಾಕಷ್ಟು ಹಿರಿಯರ ಬದುಕಿನಿಂದಲೂ ಸ್ಫೂರ್ತಿ ಪಡೆದುಕೊಂಡಿರುವ ಜಿ.ಮೂರ್ತಿ, ಮಠದ ವಿದ್ಯಾರ್ಥಿಯಾದ ಚಂದ್ರಶೇಖರ್ ಅವರಿಂದಲೂ ಕೆಲವು ಘಟನೆಗಳನ್ನು ಕೇಳಿ ತಿಳಿದುಕೊಂಡು ಕತೆಯೊಳಗೆ ಅಳವಡಿಸಿಕೊಂಡಿದ್ದಾರಂತೆ.

ನಿರ್ಮಾಪಕರಾದ ನಿಡುಸಾಲೆ ಪುಟ್ಟಸ್ವಾಮಯ್ಯ ಅವರು, ತಮ್ಮ ಸಿನಿಮಾ ಪರಿಸರ ಕಾಳಜಿ, ಶಿಕ್ಷಣ ಮತ್ತು ಜ್ಞಾನವನ್ನು ಆಧರಿಸಿ ತಯಾರಾಗಿದೆ ಎಂದು ಹೆಮ್ಮೆಯಿಂದ ಮಾತನಾಡಿದರು.

 ರವಿ ಚೇತನ್ ಮತ್ತು ವೀಣಾ ಸುಂದರ್ ಈ ಚಿತ್ರಕ್ಕೆ ಕೆಲಸ ಮಾಡಿದ ಸಂತಸದ ಗಳಿಕೆಗಳನ್ನು ನೆನಪಿಸಿಕೊಂಡರು. ಸಂಗೀತ ನಿರ್ದೇಶಕ ಪಿಚ್ಚಳ್ಳಿ ಶ್ರೀನಿವಾಸ್ ಅವರು ಎರಡು ಹಾಡನ್ನು ಹಾಡಿದ್ದು, ಅದರಲ್ಲಿ ಒಂದು ತಮ್ಮ ಗತಜೀವನಕ್ಕೆ ಸಂಬಂಧಪಟ್ಟಿದ್ದು ಎಂದು ಮಾಹಿತಿ ನೀಡಿದರು.

ಮನೋಜ್ ಮತ್ತು ತನ್ಮಯಿ `ಅಕ್ಕ-ತಮ್ಮ~ನಾಗಿ ನಟಿಸಿದ್ದಾರೆ. ಉಳಿದಂತೆ ಡಾ.ಶ್ರೀ ಶಿವಕುಮಾರ ಸ್ವಾಮಿ, ಸಿದ್ಧಲಿಂಗ ಸ್ವಾಮೀಜಿ, ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ರಮೇಶ್ ಭಟ್, ಬ್ಯಾಂಕ್ ಜನಾರ್ದನ್, ಮಹೇಂದರ್ ಮುನೋಟ್, ಶಂಕರ್ ಭಟ್, ಶಿವಕುಮಾರ ಆರಾಧ್ಯ, ರಾಮಯ್ಯ, ಜಗದೀಶ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT