ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಮ್ ಮೊಬೈಲ್ ಗಿನ್ನಿಸ್ ದಾಖಲೆ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾ ನೆಲೆಯ `ಸೋನಿಮ್ ಟೆಕ್ನಾಲಜೀಸ್~ ಕಂಪೆನಿಯ `ಎಕ್ಸ್‌ಪಿ3300~ ಮೊಬೈಲ್ ಹ್ಯಾಂಡ್‌ಸೆಟ್ `ಬಹಳ ಗಟ್ಟಿಮುಟ್ಟು~ ಎಂಬುದನ್ನು ದೃಢೀಕರಿಸುವ ಮೂಲಕ `ಗಿನ್ನಿಸ್ ದಾಖಲೆ~ ಸ್ಥಾಪಿಸಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಸುದ್ದಿ ಪ್ರಕಟಿಸಿದ ಕಂಪೆನಿಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ. ಥಾಮಸ್ ಹೊರ್ನಂಗ್,  ಈ ಹ್ಯಾಂಡ್‌ಸೆಟ್ಟನ್ನು ನೆದರ್ಲೆಂಡ್‌ನ ಈಪೆ ಎಂಬಲ್ಲಿ 25.29 ಮೀಟರ್(82 ಅಡಿ 11.67 ಇಂಚು) ಎತ್ತರದಿಂದ ಕೆಳಕ್ಕೆ ಎಸೆಯಲಾಯಿತು.
 
ಸಿಮೆಂಟ್ ಇಟ್ಟಿಗೆ ಮೇಲೆ ಬಿದ್ದರೂ ಜಖಂಗೊಳ್ಳಲಿಲ್ಲ. ಇಂಥ ವಿಶಿಷ್ಟ ಹ್ಯಾಂಡ್‌ಸೆಟ್ ರೂಪಿಸುವಲ್ಲಿ ಬೆಂಗಳೂರು ಘಟಕದ 77 ತಂತ್ರಜ್ಞರ ಶ್ರಮ ಹೆಚ್ಚಿದೆ. ವಿನ್ಯಾಸ, ತಂತ್ರಾಂಶ ಅಭಿವೃದ್ಧಿ, ಗುಣಮಟ್ಟ ದೃಢೀಕರಣ ಕೆಲಸವನ್ನೆಲ್ಲ ಬೆಂಗಳೂರು ಘಟಕವೇ ನಿರ್ವಹಿಸಿದೆ ಎಂದು ಪ್ರಶಂಸಿಸಿದರು.

ಈ ಹ್ಯಾಂಡ್‌ಸೆಟ್ ತೈಲದೊಳಕ್ಕೆ ಬಿದ್ದರೂ, ಮಂಜುಗಡ್ಡೆಯೊಳಗಿದ್ದರೂ, ನೀರಿನಲ್ಲಿ 2 ಮೀಟರ್ ಆಳದಲ್ಲಿದ್ದರೂ, 30 ನಿಮಿಷ ಮಳೆಯಲ್ಲಿ ತೊಯ್ದರೂ  ಹಾನಿಗೊಳಗಾಗದೆ ಕಾರ್ಯನಿರ್ವಹಿಸಬಲ್ಲದು. ಗಣಿ, ತೈಲೋತ್ಪನ್ನ-ರಾಸಾಯನಿಕ ಕ್ಷೇತ್ರ, ನಿರ್ಮಾಣ ರಂಗದವರಿಗೆ ಇದು ಸೂಕ್ತವಾದುದಾಗಿದೆ ಎಂದರು.

ಇದರಲ್ಲಿ `ಎಕ್ಸ್‌ಪಿ 1300~ ಕೋರ್ ತಂತ್ರಾಂಶ ಬಳಸಲಾಗಿದೆ. `ಪುಷ್ ಟು ಟಾಕ್~ (ವಾಕಿಟಾಕಿ) ಸೌಲಭ್ಯವಿದೆ. ಭಾರತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸದ್ಯ `ಟಾಟಾ ಸ್ಟೀಲ್~ ಸಿಬ್ಬಂದಿ ಬಳಸುತ್ತಿದ್ದಾರೆ.

ಸಾಧಾರಣ ಹ್ಯಾಂಡ್‌ಸೆಟ್ ಬೆಲೆ 300 ಡಾಲರ್, ಗುಣಮಟ್ಟದ್ದು 1000 ಡಾಲರ್‌ನಲ್ಲಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.ಸೋನಿಮ್ ಬೆಂಗಳೂರು ಘಟಕದ ಜಿಎಂ ಮುರಳೀಧರ ಕೋಟೇಶ್ವರ್, ವಲ್ಲಭ ಕುಲಕರ್ಣಿ ಮತ್ತಿತರರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT