ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ, ಟಾಟಾ ವಿಶ್ವ ಪ್ರಭಾವಿಗಳು

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವಿಶ್ವದ 50 ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉದ್ಯಮಿ ರತನ್ ಟಾಟಾ ಅವರು ಸ್ಥಾನ ಪಡೆದಿದ್ದಾರೆ.

ಇಗ್ಲೆಂಡ್ ಮೂಲದ ನ್ಯೂಸ್ಟೇಟ್ಸ್‌ಮನ್ ನಿಯತಕಾಲಿಕೆಯು  ನಡೆಸಿರುವ ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಸಮೀಕ್ಷೆ ಯಲ್ಲಿ ಜರ್ಮನಿ ಛಾನ್ಸೆಲರ್ ಏಂಜೆಲ್ ಮೆರ್ಕೆಲ್ ಮೊದಲ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಕೆಲವು ವಿವಾದಾತ್ಮಕ ವ್ಯಕ್ತಿಗಳ ಹೆಸರೂ ಇವೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಷ್ಫಾಕ್ ಪರ್ವೇಜ್ ಕಯಾನಿ, ಉಗ್ರ ಸಂಘಟನೆ ಅಲ್-ಖೈದಾದ ಧಾರ್ಮಿಕ ಮುಖಂಡ ಅನ್ವರ್ ಅಲ್-ಅವ್ಲಾಕಿ ಸೇರಿದಂತೆ ಮತ್ತಿತರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸೋನಿಯಾ ಅವರನ್ನು `ಮೇಡಂ ಇಂಡಿಯಾ~ ಎಂದು ಬಣ್ಣಿಸಿರುವ ಸಮೀಕ್ಷೆ ಅವರಿಗಿರುವ ರಾಜಕೀಯ ಶಕ್ತಿಯಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರತನ್ ಟಾಟಾ ಅವರನ್ನು `ಲೋಹದ ಶಿರ~ ಎಂದು ಸಮೀಕ್ಷೆ ಬಣ್ಣಿಸಿದೆ.  ಭಾರತವು ಅಂತರರಾಷ್ಟ್ರೀಯ ಶಕ್ತಿಕೇಂದ್ರವಾಗಿ ಪರಿವರ್ತನೆಯಾಗುತ್ತಿರುವುದಕ್ಕೆ ರತನ್ ಟಾಟಾ ಅವರು ಸಂಕೇತವಾಗಿದ್ದಾರೆ ಎಂದು ಶ್ಲಾಘಿಸಿದೆ.

ಇಂಗ್ಲೆಂಡ್‌ನ ಉಕ್ಕು ಉತ್ಪಾದನಾ ಕಂಪೆನಿ ಕೊರಸ್ ಮತ್ತು ಪ್ರತಿಷ್ಠಿತ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ತಯಾರಿಕಾ ಕಂಪೆನಿಖರೀದಿಸುವ ಮೂಲಕ ರತನ್ ಟಾಟಾ  ಭಾರತದ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದೂ ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT