ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಿಂದ ಹೊಸ ಫ್ಯೂಚರ್‌ಫೋನ್

Last Updated 5 ಜೂನ್ 2012, 19:30 IST
ಅಕ್ಷರ ಗಾತ್ರ

ಸೋನಿ ಇಂಡಿಯ ಸೆಪ್ಟೆಂಬರ್ ಅಂತ್ಯದೊಳಗೆ ಹೊಸ `ಫ್ಯೂಚರ್ ಫೋನ್~ಗಳನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ತಾಂತ್ರಿಕವಾಗಿ ಸ್ಮಾರ್ಟ್‌ಫೋನ್‌ಗಳ ಜತೆ ಸ್ಪರ್ಧಿಸಬಲ್ಲ, ಆದರೆ, ಅದಕ್ಕಿಂತಲೂ ಅಗ್ಗದ ದರ ಮತ್ತು ಸ್ವಲ್ಪ ಕಡಿಮೆ ಸೌಲಭ್ಯ ಹೊಂದಿರುವ `ಫ್ಯೂಚರ್ ಫೋನ್~ಗಳು ಜಾಗತಿಕ ಹ್ಯಾಂಡ್‌ಸೆಟ್ ಮಾರಕಟ್ಟೆಯಲ್ಲಿ    ಶೇ 70ರಷ್ಟು ಪಾಲು ಹೊಂದಿವೆ.

`ಫ್ಯೂಚರ್ ಫೋನ್‌ಗಳ ಆರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ. ನಮ್ಮ ಗುರಿ ಏನಿದ್ದರೂ, ಸ್ಮಾರ್ಟ್‌ಫೋನ್ ಜತೆ ಸ್ಪರ್ಧಿಸುವುದು.  ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ವಾರ್ಷಿಕ ಶೇ  70ರಷ್ಟು ವೇಗದಲ್ಲಿ ಬೆಳೆಯುತ್ತಿದ್ದು, ಹಂತ ಹಂತವಾಗಿ ಈ ಮಾರುಕಟ್ಟೆ ಪ್ರವೇಶಿಸುವ ಯೋಜನೆ ಇದೆ ಎನ್ನುತ್ತಾರೆ ಸೋನಿ ಇಂಡಿಯ ವ್ಯವಸ್ಥಾಪಕ ನಿರ್ದೇಶಕ ಪಿ. ಬಾಲಾಜಿ.

ಕೆಲವು ತಿಂಗಳ ಹಿಂದೆಯೇ `ಫ್ಯೂಚರ್ ಫೋನ್~ ಅಭಿವೃದ್ಧಿಪಡಿಸುವ ನಿರ್ಧಾರ  ತೆಗೆದುಕೊಳ್ಳಲಾಗಿದೆ. ಈಗ ಇದು ಮಾರುಕಟ್ಟೆಗೆ ಬರುವ ಹಂತದಲ್ಲಿದೆ ಎನ್ನುವ ಅವರು, ಕಂಪೆನಿ ಇತ್ತೀಚೆಗೆ ಬಿಡುಗಡೆ ಮಾಡಿರುವ `ಎಕ್ಸ್‌ಪೇರಿಯ~ ಬ್ರಾಂಡ್‌ನ 3 ಸ್ಮಾರ್ಟ್‌ಫೋನ್‌ಗಳಿಗೆ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ.

ಸದ್ಯ ಸೋನಿ ಕಂಪೆನಿಯ ಒಟ್ಟು ವರಮಾನದಲ್ಲಿ ಸ್ಮಾರ್ಟ್‌ಫೋನ್ ಪಾಲು  ಶೇ 10ರಷ್ಟಿದೆ. ಇದನ್ನು ಶೇ 40ರಿಂದ ಶೇ 45ರಷ್ಟು ಹೆಚ್ಚಿಸುವ ಗುರಿ ಇದೆ. ಕಂಪೆನಿ ಚೀನಾ, ಜಪಾನ್ ಮತ್ತು ಮೆಕ್ಸಿಕೊದಿಂದ ಬಿಡಿಭಾಗ ಆಮದು ಮಾಡಿಕೊಂಡು ಹ್ಯಾಂಡ್‌ಸೆಟ್ ತಯಾರಿಸುತ್ತದೆ. ಭಾರತದಲ್ಲಿ ತಯಾರಿಕೆ ಘಟಕ ಆರಂಭಿಸುವ ಯೋಜನೆ ಸದ್ಯಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT