ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 16-7-1962

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ನೆಹ್ರೂ ಆರೋಗ್ಯದ ಬಗ್ಗೆ ಲಂಡನ್‌ನಲ್ಲಿ ಆತಂಕ; ಕಾತರ
( ಡಿ.ವಿ.ತಹಮಣಕರ್ ಅವರಿಂದ)
ಲಂಡನ್, ಜುಲೈ 15- ವಾರಾಂತ್ಯದಲ್ಲಿ ಇಲ್ಲಿಗೆ ಬಂದ ವರದಿಗಳು ಭಾರತ ಪ್ರಧಾನಿ ನೆಹರೂ ಅವರ ಆರೋಗ್ಯದ ಬಗ್ಗೆ ಆತಂಕ ಹಾಗೂ ಕುತೂಹಲ ವ್ಯಕ್ತಪಡಿಸಿದೆ.
“ಡೈಲಿ ಹೆರಾಲ್ಡ್‌” ಪತ್ರಿಕೆಯು ನಿನ್ನೆ ವಿಶೇಷ ಲೇಖನ ಪ್ರಕಟಿಸಿತು. “ನೆಹರೂ ಅವರ ಆರೋಗ್ಯ ಸುಧಾರಿಸದಿದ್ದರೆ?” ಎಂದು ಪ್ರಶ್ನಿಸಿರುವ ಲೇಖಕ ರಸಲ್‌ಸ್ಟರ್ “ಎಲ್ಲೆಲ್ಲೂ ಈ ಮಾತು ಕೇಳಿ ಬರುತ್ತಿದೆ” ಎಂದಿದ್ದಾರೆ.

ನೆಹ್ರೂ ನಂತರ ಯಾರೆಂಬ ಬೃಹತ್ ಸಮಸ್ಯೆ ಪರಿಹಾರ
ಬೆಂಗಳೂರು, ಜುಲೈ 15- “ನೆಹರು ನಂತರ ಯಾರು?” ಅನೇಕ ವರ್ಷಗಳ ಈ ಪ್ರಶ್ನೆಗೆ ಇಂದು ಮೊದಲಬಾರಿಗೆ “ಒಂದು ಉತ್ತರ” ದೊರಕಿತು. ತಮ್ಮ “ಉತ್ತರಾಧಿಕಾರಿಗಳು” ಯಾರೆಂಬುದನ್ನು ತಿಳಿಸಿದರೂ ನೆಹರೂರವರೇ.

ಲಂಡನ್ನಿನ ಡೈಲಿ ಹೆರ‌್ಡಾ ಪತ್ರಿಕೆಯಲ್ಲಿ ಇಂದು ಲೇಖನ ಬರೆದಿರುವ ರಸಲ್‌ಸ್ಟರ್‌ರವರು “ನೆಹ್ರೂ ಅನಂತರ ಯಾರು?” ಎಂಬ ಪ್ರಶ್ನೆ ಪ್ರಸ್ತಾಪಿಸುತ್ತಾ “ಇಬ್ಬರು ಎದ್ದು ಕಾಣುತ್ತಾರೆ: ಅರ್ಥಸಚಿವ ಮೊರಾರ್ಜಿ ದೇಸಾಯಿ, ರಕ್ಷಣಾ ಸಚಿವ ಕೃಷ್ಣಮೆನನ್‌” ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT