ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿಹುದು ಹಾಸ್ಟೆಲ್ ಮಾಳಿಗೆ...

Last Updated 6 ಆಗಸ್ಟ್ 2013, 7:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ ಬಂದರೆ ಸೋರುವ ತಾರಸಿ.. ಮುರಿದ ಟ್ರಂಕ್, ಹರಿದ ಹಾಸಿಗೆ, ಹೊದಿಕೆ. ಸ್ವಚ್ಛತೆ ಇಲ್ಲಿ ಮರೀಚಿಕೆ..
-ಇದು ಪಟ್ಟಣದ ಸಾರ್ವಜನಿಕರ ಬಾಲಕ ವಿದ್ಯಾರ್ಥಿ ನಿಲಯದ ದುಃಸ್ಥಿತಿ.

ಮಳೆ ನೀರಿನ ನಡುವೆ ವಿದ್ಯಾರ್ಥಿಗಳು ನರಕಯಾತನೆಯಿಂದ ವಿದ್ಯಾಭ್ಯಾಸ ಮುಂದು ವರೆಸುವ  ಮಾಡುವ ಸ್ಥಿತಿ ಇಲ್ಲಿ ಎದುರಾಗಿದೆ.
ಮಳೆಗಾಲ ಆರಂಭವಾದಾಗಿನಿಂದ ಕೊಠಡಿ ಸಂಖ್ಯೆ 22, 23 ಮತ್ತು14 ರಲ್ಲಿ     ವಿದ್ಯಾರ್ಥಿ ಗಳು ಮಳೆ ನೀರಿನ ನಡುವೆ ವಿದ್ಯಾಭ್ಯಾಸ ಮಾಡಿ ಮಲಗುವ ಪರಿಸ್ಥಿತಿ      ನಿರ್ಮಾಣವಾಗಿದೆ. ಕಟ್ಟಡ ಸೋರುತ್ತಿ ರುವುದರಿಂದ ವಿದ್ಯಾರ್ಥಿಗಳು ಮೂಲೆ ಯಲ್ಲಿ ನಿಂತು ಮಳೆ ನಿಲ್ಲುವ ತನಕ ಕಾಯ್ದು ಕುಳಿತು ಕೊಂಡು ಕೊಠಡಿಯಲ್ಲಿ ನಿಲ್ಲುವ ನೀರ ನ್ನು ಹೊರ ಹಾಕಿ ಮಲಗುವ ಸ್ಥಿತಿ ಉಂಟಾಗಿದೆ.

ಹಾಸಿಗೆ, ಹೊದಿಕೆಗಳು ಸಂಪೂರ್ಣವಾಗಿ ನೆನೆದುಹೋಗಿವೆ. ಅದನ್ನು ಮುಟ್ಟಿದರೆ ಸಾಕು ನೀರು ಇಳಿಯುತ್ತದೆ. ಅದರಲ್ಲೆ ಮಲಗಿ ವಿದ್ಯಾರ್ಥಿಗಳು ದಿನದೂಡಬೇಕಾಗಿದೆ  ಎಂದು ವಿದ್ಯಾರ್ಥಿಗಳು ನರಕಯಾತನೆ ಸುರಳಿಯನ್ನು `ಪ್ರಜಾವಾಣಿ' ಮುಂದೆ ಬಿಚ್ಚಿಟ್ಟರು.
ಮಳೆ ನೀರನ್ನೆ ನಾವೇ ಎತ್ತಿ ಹಾಕಬೇಕು. ಶೌಚಾಲಯವನ್ನೆ ವಿದ್ಯಾರ್ಥಿಗಳೇ ಸ್ವಚ್ಛಗೊ ಳಿಸಬೇಕಾಗಿದೆ. ಶೌಚಾಲದೊಳಗೆ ಹೋದರೆ ಸಾಕು ಹಸಿರುಪಾಚಿ ಕಣ್ಣಿಗೆ ರಾಚಿ ಸುತ್ತದೆ. ಕೈತೊಳೆಯುವ ನಲ್ಲಿಯ ಬೇಸನ್ ತೊಳೆದು ವರ್ಷಗಟ್ಟಲೆ ಕಳೆದಿರು ವುದು ಕಂಡು ಬರುತ್ತದೆ.

ವಿದ್ಯಾರ್ಥಿಗಳ ಕಣ್ಣೊರೆಸಲು ಶೋಲರ್ ಅನ್ನು ಅಳವಡಿಸಲಾಗಿದೆ. ಬಿಸಿ ನೀರು ಮಾತ್ರ ಇದರಿಂದ ಬರುತ್ತಿಲ್ಲ. ಕುಡಿಯುವ ನೀರು ನೀಡಲು ಫಿಲ್ಟರ್ ಹಾಕಲಾಗಿದೆ. ಆದರೆ ದುರಸ್ತಿ ಮಾತ್ರ ನಡೆದಿಲ್ಲ. ಚಳಿಯಿಂದ ನಡುಗುವ ವಿದ್ಯಾರ್ಥಿಗಳು ಬಿಸಿ ನೀರನ್ನು ಊರಿಗೆ ಹೋಗಿ ನೋಡಬೇಕು. ವಿದ್ಯಾ ರ್ಥಿಗಳೇ ಹಾಸ್ಟೆಲ್ ಕೆಲಸ ಗಳನ್ನು ನಿರ್ವಹಿಸಬೇಕು. ಪ್ರಶ್ನಿಸಿದರೆ ಅಧಿಕಾರಿಗಳು ಮತ್ತು ಮೇಲ್ವಿ ಚಾರಕರಿಂದ ಹಾಸ್ಟೆಲ್ ಬಿಟ್ಟು ಮನೆಗೆ ಕಳುಹಿಸುವ ಬೆದರಿಕೆ ಮಾತುಗಳು ಬರುವುದರಿಂದ  ಬಾಯಿ ಮುಚ್ಚಿಕೊಂಡು ಇರಬೇಕಾದ ಸ್ಥಿತಿ ನಿರ್ಮಾಣ ವಾಗಿದೆ ಎಂದು ವಿದ್ಯಾರ್ಥಿಗಳು  ಅಳಲು ತೋಡಿಕೊಂಡರು.

ಸರಿಯಾದ ಹಾಸಿಗೆ, ಹೊದಿಕೆಗಳನ್ನು ಕೆಲವು ವಿದ್ಯಾರ್ಥಿಗಳಿಗೆ ನೀಡಿಲ್ಲ. ಮುರಿದ  ಟ್ರಂಕ್, ಹರಿದ ಹಾಸಿಗೆ, ಹೊದಿಕೆಗಳನ್ನು ನೀಡಲಾಗಿದೆ. ಅವುಗಳನ್ನು ದುರಸ್ತಿ ಪಡಿಸುವ, ಹೊಸ ಹಾಸಿಗೆ, ಹೊದಿಕೆ ನೀಡುವ ಕಾರ್ಯಕ್ಕೆ ಮಾತ್ರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ.

ವಿದ್ಯಾರ್ಥಿನಿಲಯದ ಗ್ಲಾಸ್‌ಗಳು ಒಡೆದು ಹೋಗಿರುವುದರಿಂದ ಸೊಳ್ಳೆಗಳು ಒಳಗೆ ಪ್ರವೇಶಿಸಿ ರಾತ್ರಿ ವೇಳೆ ವಿದ್ಯಾರ್ಥಿಗಳ ಕಿವಿಯಲ್ಲಿ ಗುಯ್‌ಗುಡುತ್ತವೆ. ಸೊಳ್ಳೆ ಪರದೆ ಹಾಗೂ ಇತರೆ ಬತ್ತಿಗಳನ್ನು ವಿತರಿಸುವ ಕಾರ್ಯಮಾತ್ರ ನಡೆದಿಲ್ಲ. ಕೆಲವು ಕೊಠಡಿಗಳ ಕೊಚ್ಚೆಯಾಗಿ ಮಾರ್ಪಟ್ಟಿದ್ದು, ಸ್ವಚ್ಛತೆ ಮಾತ್ರ ಮರೀಚಿಕೆ.

ಬೇಲೂರು ರಸ್ತೆಯಲ್ಲಿರುವ ಸಾರ್ವಜನಿಕರ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡವ ನ್ನು ಹೊಸ ದಾಗಿ ನಿರ್ಮಿಸುವ ಕಾರ್ಯ ಆರಂಭ ಗೊಂಡಿ ್ದದರಿಂದ ಅಂಡೆ ಛತ್ರದಲ್ಲಿ ರುವ ಖಾಸಗಿ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ಸರ್ಕಾರ ನೀಡುವ ಸವಲತ್ತುಗಳು ಮಾತ್ರ ವಿದ್ಯಾರ್ಥಿಗಳಿಗೆ ದೊರಕದಂತಾಗಿದೆ.

ಸುಮಾರು 150 ವಿದ್ಯಾರ್ಥಿಗಳು 24 ಕೊಠಡಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಮಳೆ ಯ ನೀರಿನ ನಡುವೆ ಮಕ್ಕಳು ಮಲಗುವ ಸ್ಥಿತಿಯಲ್ಲಿದ್ದರೂ ಅವರನ್ನು ಬೇರೆ ಕೊಠ ಡಿಗೆ ಸ್ಥಳಾಂತರಿಸುವ ಕೆಲಸ ಮಾತ್ರ ನಡೆದಿಲ್ಲ. ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ಮುಖಂಡರು ಭೇಟಿ ನೀಡಿದ್ದರಿಂದ ನೆನೆದಿದ್ದ ಹಾಸಿಗೆ ಹೊದಿಕೆಗಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಲು ಅಧಿಕಾರಿಗಳು ಮತ್ತು ನಿಲಯ ಮೇಲ್ವಿಚಾರಕರು ಮುಂದಾದರು. ಆ ಕೊಠಡಿಯಲ್ಲೂ ವಿದ್ಯುತ್ ದೀಪ ಮಾತ್ರ ಕಾಣಲೇ ಇಲ್ಲ.

ಇದುವರೆಗೂ ಜನಪ್ರತಿನಿಧಿಗಳಾಗಲಿ, ಅಧಿಕಾರಿ ಗಳಾಗಲಿ ಇತ್ತ ಮುಖಹಾಕಿಲ್ಲ. ಸೋಮವಾರ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ರಾಜ್ಯ ಕಾರ್ಯದರ್ಶಿ ಸಂದೀಪ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಧನಂಜಯ ಮತ್ತು ನಿಲಯ ಮೇಲ್ವಿಚಾರಕ ಶ್ರೀನಿವಾಸ ಮೂರ್ತಿ ಅವರನ್ನು ತರಾಟೆಗೆ ತೆಗೆ ದುಕೊಂಡರು. ಇಂತಹ ನರಕಯಾತನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಜಿಲ್ಲಾಸಮಾಜ ಕಲ್ಯಾ ಣಾಧಿಕಾರಿಗಳು ಭೇಟಿ ನೀಡಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT