ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯಕ್ಕಾಗಿ ಬೆಟ್ಟದ ನೆಲ್ಲಿಕಾಯಿ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಟ್ಟದ ನೆಲ್ಲಿಕಾಯಿಯ ಹಲವಾರು ಉಪಯೋಗಗಳು ಇಲ್ಲಿವೆ.
-ಬೆಟ್ಟದ ನೆಲ್ಲಿಕಾಯಿನ್ನು ಜಜ್ಜಿ ಪುಡಿ ಮಾಡಿ,ಅದಕ್ಕೆ ಅರಿಶಿಣ ಸೇರಿಸಿ ಕೈಕಾಲುಗಳಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ ಅನಗತ್ಯ ಕೂದಲ ಸಮಸ್ಯೆ ನಿವಾರಣೆ ಆಗುವುದು.

-ಬೆಟ್ಟದ ನಲ್ಲಿಕಾಯಿ ಜ್ಯೂಸ್ ತಯಾರಿಸಿ ಸ್ನಾನದ ನೀರಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಬೆವರು ವಾಸನೆಗೆ ಕಡಿವಾಣ.

-ಎರಡು ಚಮಚ ಅಂಟುವಾಳದ ಪುಡಿಗೆ ಎರಡು ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ ಹಾಕಿ ತಲೆಕೂದಲಿಗೆ ಹಚ್ಚಿ ತೊಳೆದು ನೋಡಿ ಕೂದಲು ಕಾಂತಿಯುತವಾಗುವುದು.

-ಹೇನಿನ ಕಾಟ ಹೆಚ್ಚಾಗಿದ್ದರೆ ಬೆಟ್ಟದ ನೆಲ್ಲಿಕಾಯಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ನಿಂಬೆರಸ ಸೇರಿಸಿ ಕೂದಲ ಬುಡಕ್ಕೆ ಹಚ್ಚಿ ಒಂದೆರೆಡು ತಾಸು ಬಿಟ್ಟು ತೊಳೆಯಿರಿ.

-ಕಪ್ಪು ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಇಟ್ಟುಕೊಳ್ಳಿ.

ಆಲೂ ಸೌಂದರ್ಯ!

-ಹಸಿ ಆಲೂಗಡ್ಡೆ ತುರಿದು ರಸ ತೆಗೆದು ಮುಖದ ಮೇಲಿನ ಕಲೆ ಹಾಗೂ ಕಣ್ಣ ಸುತ್ತಲಿನ ಕಲೆ ಹೋಗಿಸಿಕೊಳ್ಳಿ.

-ಹಸಿಹಾಲು ಹಾಗೂ ಆಲೂಗಡ್ಡೆರಸಕ್ಕೆ ಅರ್ಧಚಮಚ ಜೇನು ಸೇರಿಸಿ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತ ಬಂದರೆ ಸುಕ್ಕುಗಳು ಕಡಿಮೆ ಆಗುವುದು.

-ಮೊಣಕೈ,ಮೊಣಕಾಲು ಕಪ್ಪಾಗಿದ್ದರೆ,ಆಲೂರಸಕ್ಕೆ ನಿಂಬೆರಸ ಸೇರಿಸಿ ಹಚ್ಚುತ್ತ ಬನ್ನಿ.
-ಟೊಮೆಟೋ ಹಣ್ಣಿನ ರಸಕ್ಕೆ,ಆಲೂರಸ ಸೇರಿಸಿ ಮುಖ ತೊಳೆಯುವುದರಿಂದ ಕಾಂತಿ ಹೆಚ್ಚುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT