ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯವರ್ಧಕ ಕ್ಲಿನಿಕ್ ಉದ್ಘಾಟನೆ

Last Updated 14 ಡಿಸೆಂಬರ್ 2012, 20:08 IST
ಅಕ್ಷರ ಗಾತ್ರ

ಬೆಂಗಳೂರು: ಸೌಂದರ್ಯವರ್ಧಕ ಚಿಕಿತ್ಸೆ ನೀಡುವ ಐರೋಪ್ಯ ದೇಶದ ಅತ್ಯಾಧುನಿಕ ಹಾಗೂ ಅತ್ಯುತ್ತಮ ತಂತ್ರಜ್ಞಾನವುಳ್ಳ ಸೌಂದರ್ಯ ವರ್ಧಕ ಕ್ಲಿನಿಕ್ `ನ್ಯೂ' ನಗರದ ಕೋರಮಂಗಲದ ಬೀಮ್ಸ ಆಸ್ಪತ್ರೆಯಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು.

ನ್ಯೂ ಕಾಸ್ಮೆಟಿಕ್ ಕ್ಲಿನಿಕ್ ಮತ್ತು ಬೀಮ್ಸ ಆಸ್ಪತ್ರೆಯ ಸಹಯೋಗದಲ್ಲಿ  `ನ್ಯೂ' ಸೌಂದರ್ಯ ವರ್ಧಕ ಚಿಕಿತ್ಸಾ ಘಟಕವು ಆರಂಭಗೊಂಡಿದೆ. `ವ್ಯಕ್ತಿತ್ವದಂತೆ ಸೌಂದರ್ಯವೂ ಕೂಡ ಇಂದಿನ ಯುಗದಲ್ಲಿ ಅಗತ್ಯವಾಗಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಇದೀಗ ಮೇಲ್ಮಧ್ಯಮ ವರ್ಗದ ಜನರು ಸೌಂದರ್ಯ ವರ್ಧಕ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ' ಎಂದು ನ್ಯೂ ಕಾಸ್ಮೆಟಿಕ್‌ನ ಕ್ಲಿನಿಕಲ್ ನಿರ್ದೇಶಕ ಡಾ.ಉದಿತ್ ಗುಪ್ತಾ ಹೇಳಿದರು.

`ಈವರೆಗೂ ಕ್ಲಿನಿಕಲ್ ಆರೈಕೆ ಎನ್ನುವುದು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ ಎಂಬ ಮಾತಿತ್ತು. ಆದರೆ, ಸೌಂದರ್ಯ ಎನ್ನುವುದು ಒಬ್ಬರಿಗೇ ಸೀಮಿತವಾದುದಲ್ಲ. ಸೌಂದರ್ಯ ವರ್ಧಕ ಚಿಕಿತ್ಸಾ ಘಟಕವು ಪ್ರತಿಯೊಬ್ಬರಿಗೂ ಗುಣಮಟ್ಟದ ಕ್ಲಿನಿಕಲ್ ಆರೈಕೆ ನೀಡಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ಈ ಘಟಕದಿಂದ ಗುಣಮಟ್ಟದ ಸೌಂದರ್ಯ ವರ್ಧಕ ಚಿಕಿತ್ಸೆಯನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸಲಾಗುವುದು. ಇಂದಿನ ಜನರ ಬದಲಾದ ಅಪೇಕ್ಷೆಗಳು ಹಾಗೂ ಜೀವನಶೈಲಿಗೆ ತಕ್ಕಂತೆ ಚಿಕಿತ್ಸೆ ಹಾಗೂ ಬೆಲೆಯನ್ನು ರೂಪಿಸಲಾಗಿದೆ' ಎಂದರು.

ನ್ಯೂ ಕಾಸ್ಮೆಟಿಕ್‌ನ ಮಾರಾಟ ವಿಭಾಗದ ನಿರ್ದೇಶಕಿ ಮೇರಿ ಕೆನ್ಕಿನ್ಸ್ ಅವರು ಮಾತನಾಡಿ, `ಕ್ಲಿನಿಕ್‌ನಲ್ಲಿ ಸೌಂದರ್ಯ ವರ್ಧಕ ಶಸ್ತ್ರ ಚಿಕಿತ್ಸೆ, ಬೇಡದ ಕೊಬ್ಬು ತೆಗೆಯಲು, ಕೂದಲು ಉದರುವಿಕೆಗೆ ಚಿಕಿತ್ಸೆ, ತ್ವಚೆಯ ಆರೈಕೆಯ ಚಿಕಿತ್ಸೆ ಇನ್ನು ಮುಂತಾದ ಚಿಕಿತ್ಸೆಗಳು ಲಭ್ಯವಾಗಲಿವೆ' ಎಂದರು.

ನಟಿ ರಾಗಿಣಿ ದ್ವಿವೇದಿ ಮಾತನಾಡಿ, `ಇಂದಿನ ಆಧುನಿಕ ಯುಗದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸೌಂದರ್ಯ ಮುಖ್ಯವಾಗಿದೆ. ಇಂತಹ ಸಂದರ್ಭದಲ್ಲಿ ನಗರದಲ್ಲಿ `ನ್ಯೂ' ಸೌಂದರ್ಯ ವರ್ಧಕ ಚಿಕಿತ್ಸಾ ಘಟಕವು ಆರಂಭವಾಗಿರುವುದು ಸಂತಸ ತಂದಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT