ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ವಂಚಿತ ಮುರುಗೇಂದ್ರಪ್ಪ ಬಡಾವಣೆ

Last Updated 19 ಸೆಪ್ಟೆಂಬರ್ 2013, 6:48 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಪೊಲೀಸ್‌ ವಸತಿಗೃಹಗಳ ಹಿಂಭಾಗ ಇರುವ ಮುರುಗೇಂದ್ರಪ್ಪ ಬಡಾವಣೆ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ನಿಲರ್ಕ್ಷ್ಯಕ್ಕೆ ಒಳಗಾಗಿದೆ.

ಬಡಾವಣೆಯ ರಸ್ತೆಗಳನ್ನು ಅಭಿವೃದ್ಧಿಪಡಿಸದೇ ಇರುವುದರಿಂದ ರಸ್ತೆಯಲ್ಲಿ ತ್ಯಾಜ್ಯ ನೀರು ತುಂಬಿದ್ದು, ನಾಗರಿಕರು ಓಡಾಡಲು ತೊಂದರೆಯಾಗಿದೆ. ಈ ಭಾಗದಲ್ಲಿ ಮಕ್ಕಳು, ವೃದ್ಧರು  ಸಂಚರಿಸುವುದೇ ಕಷ್ಟವಾಗಿದೆ. ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ತಾ್ಯಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಇಡೀ ಬಡಾವಣೆ ದುರ್ವಾಸನೆಯಿಂದ ಕೂಡಿದೆ.

ಪೊಲೀಸ್‌ ವಸತಿಗೃಹದ ಮುಂಭಾಗ ಚರಂಡಿ ನೀರು ನಿಂತಿದೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸ್‌ ವಸತಿಗೃಹಗಳಲ್ಲಿನ ಜನರು ಪರಿತಪಿಸುವಂತಾಗಿದೆ. ಇದೇ ವಾರ್ಡ್‌ಗೆ ಸೇರುವ ಎನ್‌ಇಎಸ್‌ ಬಡಾವಣೆ ಮತ್ತು ಜಿಎಂ ಬಡಾವಣೆಗಳಲ್ಲೂ ಸುಸಜ್ಜಿತ ರಸ್ತೆಗಳಿಲ್ಲದೆ ಸಾವರ್ಜನಿಕರು ಸಂಕಷ್ಟ ಎದುರಿಸುವಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT