ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ವಿಸ್ತರಿಸಿ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಿಗದಿ ಪಡಿಸಿದ ದಿನಗಳಲ್ಲಿ ಸಂಚಾರಿ ಗ್ರಂಥಾಲಯದ ವ್ಯಾನ್ (ಬಸ್) ಹೋಗಿ ನಿಲುತ್ತದೆ. ಈ ಬಸ್‌ನ ಸೌಕರ್ಯವು ಕೇವಲ ಮುಂದುವರಿದ ಕ್ಷೇತ್ರಗಳಿಗೆ ಮಾತ್ರ ಸೀಮಿತವೇ ಅಥವಾ ಎಲ್ಲಾ ಪ್ರದೇಶಗಳ ಜನರಿಗೂ ಲಭ್ಯವೇ? ಗ್ರಂಥಾಲಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕು.
 

ಸಂಚಾರಿ ಗ್ರಂಥಾಲಯದ ಸೌಕರ್ಯವನ್ನು ಬಡವರೇ ಹೆಚ್ಚಾಗಿ ವಾಸಿಸುವಂಥ ಕೊಳೆಗೇರಿ ಪ್ರದೇಶಗಳಿಗೂ ವಾರದಲ್ಲಿ ಒಂದು ದಿನ ನಿಗದಿತ ಸಮಯದಲ್ಲಿ ಒದಗಿಸಬೇಕು. ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿನಗರಕ್ಕೂ ಈ ಸೌಕರ್ಯವನ್ನು ವಿಸ್ತರಿಸಬೇಕೆಂಬ ಮನವಿ.
- ಎಲ್ಲಪ್ಪ

ಹೊಯ್ಸಳದಿಂದ ವಸೂಲಿ
ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯ ಚನ್ನಸಂದ್ರ ಗ್ರಾಮದ ಮುಖ್ಯ ರಸ್ತೆಯಲ್ಲಿನ ಚರಂಡಿಗೆ ಮಣ್ಣು ತುಂಬಿಸಿ ಅದರ ಮೇಲೆ ಕಬಾಬ್ ಅಂಗಡಿ, ಚಿಲ್ಲರೆ ಅಂಗಡಿ, ಮೀನು ಮಾರಾಟದ ಅಂಗಡಿಗಳನ್ನು ಸ್ಥಾಪಿಸಲು ಪರವಾನಗಿ ಕೊಟ್ಟು ಪ್ರತಿ ದಿನ ಅವರಿಂದ ಮಾಮೂಲಿ ವಸೂಲು ಮಾಡಲಾಗುತ್ತಿದೆ.

ಸಾರ್ವಜನಿಕರ ಎದುರಿನಲ್ಲೇ ಹೊಯ್ಸಳದಿಂದ ಬಂದು ವಸೂಲಿ ಮಾಡುವುದು ನಿಜಕ್ಕೂ ಅವಮಾನಕರ. ಪೊಲೀಸ್ ಇಲಾಖೆಯವರು ಇದನ್ನು ತಪ್ಪಿಸಬೇಕು.
- ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT