ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಜ್ವಾಲೆಯ ಕಣಗಳು ಭೂಮಿಗೆ

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸೂರ್ಯನ ಬೃಹತ್ ಸೌರಕಲೆಯ ಪ್ರದೇಶದಲ್ಲಿ ಗುರುವಾರ ಭಾರಿ ಸೌರಜ್ವಾಲೆ ಎದ್ದಿದ್ದು, ಅದು ಶನಿವಾರ ಬೆಳಿಗ್ಗೆ 10.20ರ ವೇಳೆಗೆ ಭೂ ವಾತಾವರಣ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ.

ಭೂಮಿಯೆಡೆಗೆ ಮುಖ ಮಾಡಿರುವ ಸೂರ್ಯನ `ಚಲನಶೀಲ ವಲಯ- 1520~ರಲ್ಲಿ ಎದ್ದ ಈ ಸೌರಜ್ವಾಲೆಯಿಂದಾಗಿ ಅಲ್ಲಿನ ವಾತಾವರಣದ ಕಣಗಳು ಸೆಕೆಂಡಿಗೆ 1400 ಕಿ.ಮೀ. ವೇಗದಲ್ಲಿ ಧಾವಿಸುತ್ತಿವೆ.

ಇವು ಭೂ ವಾತಾವರಣ ಹೊಕ್ಕಾಗ ಭೂಅಯಸ್ಕಾಂತೀಯ ಸಮತೋಲನದಲ್ಲಿ ಸ್ವಲ್ಪ ಏರುಪೇರಾಗಬಹುದಾದರೂ ವಿದ್ಯುತ್ ಗ್ರಿಡ್, ಉಪಗ್ರಹ ಹಾಗೂ ಗಗನಯಾನಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಬೇಸಿಗೆಯಲ್ಲಿ ಎದ್ದ ಪ್ರಬಲ ಸೌರಜ್ವಾಲೆ ಇದಾಗಿದೆ. ಇದು ಜುಲೈ 6ರಂದು ಎದ್ದಿದ್ದ ಜ್ವಾಲೆಗಿಂತ ಶೇ 50ರಷ್ಟು ಹೆಚ್ಚು ಪ್ರಬಲವಾಗಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT