ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕಲ್ಪಿಸಲು 6 ತಿಂಗಳ ಗಡುವು

Last Updated 10 ಮೇ 2012, 19:30 IST
ಅಕ್ಷರ ಗಾತ್ರ

ಗುಡ್ಡಾಪುರ (ಮಹಾರಾಷ್ಟ್ರ): `ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಸಿಡಿದೆದ್ದಿರುವ ಗಡಿಭಾಗದ ಜತ್ತ ತಾಲ್ಲೂಕಿನ 44 ಗ್ರಾಮಗಳ ಕನ್ನಡಿಗರು,  ಅಗತ್ಯ ಸೌಲಭ್ಯ ಕಲ್ಪಿಸಲು ತಮ್ಮ ರಾಜ್ಯ ಸರ್ಕಾರಕ್ಕೆ ಆರು ತಿಂಗಳ ಗಡುವು ನೀಡಿದ್ದಾರೆ.

ಸುಕ್ಷೇತ್ರ ಗುಡ್ಡಾಪುರದಲ್ಲಿ ಗುರುವಾರ ನಡೆದ ಈ ಭಾಗದ 44 ಗ್ರಾಮಗಳ ಜನಪ್ರತಿನಿಧಿಗಳ  ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಮುಂದಿನ ಹೋರಾಟ ರೂಪಿಸಲು ಹಾಗೂ ಉಭಯ ಸರ್ಕಾರಗಳ ಜೊತೆಗೆ ಸಮಾಲೋಚನೆ ನಡೆಸಲು ಸಾಂಗಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಮಹಾದೇವ ಅಂಕಲಗಿ ನೇತೃತ್ವದಲ್ಲಿ 21 ಜನ ಸದಸ್ಯರನ್ನೊಳಗೊಂಡ `ಜತ್ತ ತಾಲ್ಲೂಕು ಗಡಿನಾಡು ಸಂಘರ್ಷ ಸಮಿತಿ~ ರಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT