ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕಲ್ಪಿಸಲು ಹಮಾಲರ ಆಗ್ರಹ

Last Updated 21 ಡಿಸೆಂಬರ್ 2012, 10:04 IST
ಅಕ್ಷರ ಗಾತ್ರ

ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಹಮಾಲರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಮಿಕರ ಒಕ್ಕೂಟ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಜಿಲ್ಲೆಯ ರಾಜ್ಯ ಪಡಿತರ, ನಾಗರಿಕ ಅಗತ್ಯವಸ್ತುಗಳ ಸಂಗ್ರಹಣಾ ಮತ್ತು ವಿತರಣಾ ದಾಸ್ತಾನು ಮಳಿಗೆಗಳಲ್ಲಿ ಹಲವು ದಶಕಗಳಿಂದ ಹಮಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಸೂಕ್ತ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಸಭೆ ನಡೆಸಿ, ನಿರ್ಣಯ ಕೈಗೊಂಡಿದೆ. ಆದರೆ, ಇದುವರೆಗೂ ಯಾವುದೇ ನಿರ್ಣಯ ಅನುಷ್ಠಾನ ಗೊಂಡಿಲ್ಲ. ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಮನಬಂದಂತೆ ನಿಯಮ ಬದಲಿಸುತ್ತಿದ್ದಾರೆ. ಗುತ್ತಿಗೆದಾರರ ಜತೆ ಶಾಮೀಲಾಗಿ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು.

50 ಕೆ.ಜಿ. ತೂಕದ ಪ್ರತಿ ಚೀಲ ಲೋಡ್ - ಅನ್‌ಲೋಡ್‌ಗೆ ತಲಾ ರೂ 5, 70 ಕೆ.ಜಿ. ತೂಕದ ಚೀಲ ಲೋಡ್-ಅನ್‌ಲೋಡ್‌ಗೆ ತಲಾ ರೂ 5,100 ಕೆ.ಜಿ. ತೂಕದ ಚೀಲ ಲೋಡ್-ಅನ್‌ಲೋಡ್‌ಗೆ ತಲಾ ರೂ 100 ನೀಡಬೇಕು. ಇದರ ಜತೆ ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಅನಿಲ್, ಉಪಾಧ್ಯಕ್ಷ ಬೋರೇಗೌಡ, ಪ್ರಧಾನ ಕಾರ್ಯದರ್ಶಿ ಎನ್. ಪುಟ್ಟಸ್ವಾಮಿ, ಕಾರ್ಯದರ್ಶಿ ಎಸ್. ರವಿಕುಮಾರ್, ಖಜಾಂಚಿ ಜಾರ್ಜ್ ಸಲ್ಡಾನ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಹಮಾಲರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಮಿಕರ ಒಕ್ಕೂಟ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಜಿಲ್ಲೆಯ ರಾಜ್ಯ ಪಡಿತರ, ನಾಗರಿಕ ಅಗತ್ಯವಸ್ತುಗಳ ಸಂಗ್ರಹಣಾ ಮತ್ತು ವಿತರಣಾ ದಾಸ್ತಾನು ಮಳಿಗೆಗಳಲ್ಲಿ ಹಲವು ದಶಕಗಳಿಂದ ಹಮಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಸೂಕ್ತ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಸಭೆ ನಡೆಸಿ, ನಿರ್ಣಯ ಕೈಗೊಂಡಿದೆ. ಆದರೆ, ಇದುವರೆಗೂ ಯಾವುದೇ ನಿರ್ಣಯ ಅನುಷ್ಠಾನ ಗೊಂಡಿಲ್ಲ. ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಮನಬಂದಂತೆ ನಿಯಮ ಬದಲಿಸುತ್ತಿದ್ದಾರೆ. ಗುತ್ತಿಗೆದಾರರ ಜತೆ ಶಾಮೀಲಾಗಿ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು.

50 ಕೆ.ಜಿ. ತೂಕದ ಪ್ರತಿ ಚೀಲ ಲೋಡ್ - ಅನ್‌ಲೋಡ್‌ಗೆ ತಲಾ ರೂ 5, 70 ಕೆ.ಜಿ. ತೂಕದ ಚೀಲ ಲೋಡ್-ಅನ್‌ಲೋಡ್‌ಗೆ ತಲಾ ರೂ 5,100 ಕೆ.ಜಿ. ತೂಕದ ಚೀಲ ಲೋಡ್-ಅನ್‌ಲೋಡ್‌ಗೆ ತಲಾ ರೂ 100 ನೀಡಬೇಕು. ಇದರ ಜತೆ ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಅನಿಲ್, ಉಪಾಧ್ಯಕ್ಷ ಬೋರೇಗೌಡ, ಪ್ರಧಾನ ಕಾರ್ಯದರ್ಶಿ ಎನ್. ಪುಟ್ಟಸ್ವಾಮಿ, ಕಾರ್ಯದರ್ಶಿ ಎಸ್. ರವಿಕುಮಾರ್, ಖಜಾಂಚಿ ಜಾರ್ಜ್ ಸಲ್ಡಾನ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT