ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಪಡೆಯಲು ಹೋರಾಟ ಅಗತ್ಯ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: `ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತಂದ ಕೂಡಲೇ ಈ ಭಾಗದವರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸೌಲಭ್ಯ ದೊರೆಯುವುದಿಲ್ಲ. ಬದಲಿಗೆ, ರಾಜ್ಯ ಸರ್ಕಾರ ತಿದ್ದುಪಡಿಯನ್ನು ಒಪ್ಪಿ, ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಸೌಲಭ್ಯಗಳು ದೊರೆಯಲಿವೆ~ ಎಂದು ಉಪನ್ಯಾಸಕ ರಜಾಕ್ ಉಸ್ತಾದ್ ಅಭಿಪ್ರಾಯಪಟ್ಟರು.

ಜಿಲ್ಲಾ ಹಿತರಕ್ಷಣಾ ವೇದಿಕೆಯು ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಜಾಗೃತಿ ಸಮಾವೇಶ~ದಲ್ಲಿ ಅವರು ಮಾತನಾಡಿದರು. `ಸೌಲಭ್ಯ ಪಡೆದುಕೊಳ್ಳಲು ಹೋರಾಟ ನಡೆಸುವ ಅಗತ್ಯವಿದೆ. ಯುವಜನತೆ ಜಾಗೃತರಾಗಿ, ಒಂದಾಗಿ ಹೋರಾಟ ನಡೆಸಬೇಕು.

ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ವಿಶೇಷ ನಿಯಮಗಳಿದ್ದು, ಗ್ರಾಮ, ತಾಲ್ಲೂಕು, ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಸ್ಥಳೀಯರಿಗೆ ಶೇ 80ರಷ್ಟು ಮೀಸಲಾತಿ, ರಾಜ್ಯ ಮಟ್ಟದಲ್ಲಿ ಶೇ 25ರಷ್ಟು ಮೀಸಲಾತಿ ದೊರೆಯಲಿದೆ. ಅಲ್ಲದೆ, ನಿಗಮ ಮಂಡಳಿಗಳು, ಅಕಾಡೆಮಿಗಳು, ಸಚಿವ ಸಂಪುಟದಲ್ಲೂ ಶೇ 25ರಷ್ಟು ಮೀಸಲಾತಿ ದೊರೆಯುತ್ತದೆ. ಆದರೆ, ನಿಯಮಗಳ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು ಎಂದು ತಿಳಿಸಿದರು.

ಹೈದರಾಬಾದ್-ಕರ್ನಾಟಕ ಭಾಗದ ವಿವಿಧೆಡೆ ಈ ರೀತಿಯ ಸಮಾವೇಶಗಳನ್ನು ಹಮ್ಮಿಕೊಂಡು, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಮಿತಿಯ ಸಂಚಾಲಕ ಸಿರಿಗೇರಿ ಪನ್ನರಾಜ್ ತಿಳಿಸಿದರು.
ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕೆ.ನಾಗಭೂಷಣರಾವ್, ಟಿ.ಜಿ. ವಿಠ್ಠಲ್, ಎಚ್.ಎಸ್. ಪಾಟೀಲ, ಅಲ್ಲಮಪ್ರಭು ಬೆಟದೂರ, ರಿಜ್ವಾನ್ ಖಾನ್, ಡಾ. ರಮೇಶ್ ಗೋಪಾಲ್, ಕೆ.ಉಮಾಪತಿ, ರವಿಕುಮಾರ್, ಕೆ.ವೆಂಕಟೇಶುಲು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT