ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಹಂಚಿಕೊಂಡು ಮುಂದೆ ಬನ್ನಿ

Last Updated 27 ಸೆಪ್ಟೆಂಬರ್ 2011, 8:05 IST
ಅಕ್ಷರ ಗಾತ್ರ

ಶಿರಸಿ: ವಾಲ್ಮೀಕಿ ಸಮಾಜ ಎಲ್ಲ ದೌರ್ಬಲ್ಯಗಳನ್ನು ಮೆಟ್ಟಿ ನಿಂತಿರುವ ಸಮುದಾಯವಾಗಿದೆ. ಸಮಾಜದ ಜನ ಸಂಘಟಿತರಾಗಿ ಸರ್ಕಾರಿ ಸೌಲಭ್ಯ ಪಡೆದುಕೊಂಡು ಸಮಾನವಾಗಿ ಹಂಚಿಕೊಳ್ಳಬೇಕು. ಆ ಮೂಲಕ ವಾಲ್ಮೀಕಿ ಸಮಾಜ ಮುಖ್ಯವಾಹಿನಿಗೆ ಬರುವಂತಾ ಗಬೇಕು ಎಂದು ದಾವಣಗೆರೆ ರಾಜನ ಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಕರೆ ನೀಡಿದರು.

ಅವರು ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಾಲ್ಮೀಕಿ ನಾಯಕ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಸಮಾಜದ ಜನರು ಸಂಘಟ ನಾತ್ಮಕವಾಗಿ ಬಲಗೊಳ್ಳಬೇಕು. ಸಮಾಜಕ್ಕೆ ವಾಲ್ಮೀಕಿ ಸಮುದಾಯದ ಕೊಡುಗೆ ಸಾಕಷ್ಟಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಭಾರತೀಯ ಜನತಾ ಪಕ್ಷದ ರಾಜ್ಯ ಸರ್ಕಾರ ಪರಿ ಶಿಷ್ಠ ಜಾತಿ-ಪಂಗಡಗಳಿಗೆ ಸಾಕಷ್ಟು ಸೌಲಭ್ಯ ನೀಡುತ್ತಿದೆ. ವಾಲ್ಮೀಕಿ ಗುರುಪೀಠ ಅಭಿವೃದ್ಧಿಗೆ ರಾಜ್ಯ ಸರ್ಕಾರ ಐದು ಕೋಟಿ ರೂಪಾಯಿ ನೆರವು ನೀಡಿದೆ.
 
ವಾಲ್ಮೀಕಿ ಸಮಾಜದವರು ಸಂಘಟನೆ ಬಲಪಡಿಸಿ ಕೊಳ್ಳುವ ಮೂಲಕ ಇನ್ನಷ್ಟು ಪ್ರಬಲರಾಗಿ ಸರ್ಕಾರ ಸೌಲಭ್ಯ ಪಡೆದುಕೊಳ್ಳಲು ಪ್ರಯತ್ನಿಸಬೇಕು. ರಾಮಾಯಣ ಕರ್ತೃ ವಾಲ್ಮೀಕಿ ಇಂದಿಗೂ ಪ್ರಸ್ತುತ ರಾಗಿದ್ದು, ಅವರ ಸಾಧನೆ ಮಾರ್ಗ ದರ್ಶಕ ವಾಗಬೇಕು ಎಂದರು. ಸಮಾಜದಲ್ಲಿ ಜಾತಿ- ಉಪಜಾತಿಗಳ ನಡುವೆ ಸಾಮರಸ್ಯದ ಕೊಂಡಿ ಬೆಳೆಯಬೇಕು ಎಂದು ಅವರು ಹೇಳಿದರು.

ವಾಲ್ಮೀಕಿ ಸಮಾಜದವರು ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳ ಬೇಕು. ಇದರಿಂದ ಸಮುದಾಯದ ಅಭಿವೃದ್ಧಿಗೆ ಸಹಕಾರಿ ಯಾಗುತ್ತದೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸಲು ಪಾಲಕರು ಲಕ್ಷ್ಯ ವಹಿಸಬೇಕು ಎಂದು ಅವರು ಹೇಳಿದರು.

ಸಾಮಾಜಿಕ ಮುಖಂಡ ನರಸಿಂಹಪ್ಪ ಸಾಕಣ್ಣ ನವರ ದಾಸನಕೊಪ್ಪದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಐದು ಗುಂಟೆ ಸ್ಥಳದಾನ ಮಾಡಿದ್ದು ಅವರನ್ನು ಸನ್ಮಾನಿಸಲಾಯಿತು. ಪೊಲೀಸ್ ಉಪ ಅಧೀಕ್ಷಕ ಎನ್.ಡಿ.ಬಿರ್ಜೆ, ತಹ ಸೀಲ್ದಾರ ಎಚ್.ಕೆ.ಕೃಷ್ಣಮೂರ್ತಿ, ವಾಲ್ಮೀಕಿ ಸಮು ದಾಯ ಪ್ರಮುಖರಾದ ಮಹಾದೇವಪ್ಪ, ಈರಪ್ಪ ಕಾಟೇನಳ್ಳಿ, ಉಮೇಶ ಹಳೇಬಂಕಾಪುರ, ರಾಮ ದಾಸ ವಾಲ್ಮೀಕಿ, ಮಹೇಶ ತಳವಾರ, ಗಿರಿಜಾ ನಾಯಕ ಮತ್ತಿತರರು ಉಪಸ್ಥಿತರಿದ್ದರು. ಸಮಾ ವೇಶದ ಅಂಗವಾಗಿ ನಗರದಲ್ಲಿ ಬೃಹತ್ ಮೆರ ವಣಿಗೆ ನಡೆಯಿತು.

ಸಿದ್ದಪ್ಪ ಬಿರಾದಾರ ತಂಡದಿಂದ ಗೊಂಬೆಯಾಟ ಪ್ರದರ್ಶನ ನಡೆಯಿತು. ಅಂಧ ಮಕ್ಕಳು ಸಂಗೀತ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT