ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌವಿಕ್ ಪಾಲ್ ಶವ ಮುಂದಿನ ವಾರ ಭಾರತಕ್ಕೆ

Last Updated 24 ಜನವರಿ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಇಲ್ಲಿಯ ಮ್ಯಾಂಚೆಸ್ಟರ್‌ನ ಕಾಲುವೆಯಲ್ಲಿ ಶವವಾಗಿ ಪತ್ತೆಯಾದ ಬೆಂಗಳೂರಿನ ವಿದ್ಯಾರ್ಥಿ ಸೌವಿಕ್ ಪಾಲ್ ಶವದೊಂದಿಗೆ ಆತನ ತಂದೆ ಮುಂದಿನ ವಾರ ಭಾರತಕ್ಕೆ ಹಿಂತಿರುಗುತ್ತಾರೆ.

ಸೌವಿಕ್ ಸಾವಿನ ಕುರಿತು ನಡೆಯುತ್ತಿರುವ ತನಿಖೆ ಪ್ರಕ್ರಿಯೆ ಈ ವೇಳೆಗಾಗಲೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ವಿಷವುಣಿಸಿ ಕೊಲೆಮಾಡಿರುವ ಸಾಧ್ಯತೆಯ ಕುರಿತೂ ನಡೆಸಿದ ತನಿಖೆಯ ವರದಿ ಕಾಯಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆ ಮುಗಿದು ಬುಧವಾರದ ಹೊತ್ತಿಗೆ ಭಾರತಕ್ಕೆ ವಾಪಸಾಗುವ ನಿರೀಕ್ಷೆಯಲ್ಲಿರುವೆ ಎಂದು ಸೌವಿಕ್ ತಂದೆ ಶಾಂತನು ಪಾಲ್ ತಿಳಿಸಿದರು.

`ಸೌವಿಕ್ ಇನ್ನಿಲ್ಲ ಎನ್ನುವುದನ್ನು ನಾನು ನಿರೀಕ್ಷಿಸಲೂ ಆಗುತ್ತಿಲ್ಲ. ಆತನಿಗೆ ಕಲೆಯಲ್ಲಿ ಅಪಾರ ಆಸಕ್ತಿ ಇದ್ದು ಕಲಾಕೃತಿಗಳನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುವೆ' ಎಂದು ಶಾಂತನು ಮಗನ ಒಡನಾಟವನ್ನು ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT