ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದತೆ ಇದ್ದಲ್ಲಿ ಸಮನ್ವಯತೆ ಸಾಧ್ಯ

Last Updated 15 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಭದ್ರಾವತಿ: ‘ಎಲ್ಲಾ ಧರ್ಮಗಳ ಸಾರ ಶಾಂತಿ, ಸೌಹಾರ್ದತೆ ಸಾರುವುದು. ಅದನ್ನು ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮನ್ವಯತೆ ಮೂಡುತ್ತದೆ’ ಎಂದು ಡಿವೈಎಸ್‌ಪಿ ಮೆಂಡೋನ್ಸಾ ಹೇಳಿದರು.ಇಲ್ಲಿನ ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಈದ್ ಮಿಲಾದ್ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಧರ್ಮದ ಗುರುಗಳು ಬೋಧಿಸುವುದು ಶಾಂತಿ ಮಂತ್ರ. ಹಬ್ಬಗಳ ಆಚರಣೆಯ ಹಿಂದಿನ ಉದ್ದೇಶ ಸಹ ಇದೇ ಆಗಿದೆ. ಮೆರವಣಿಗೆ ಸಾಗುವ ಹಾದಿಯಲ್ಲಿ ಪ್ರತಿಯೊಬ್ಬರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ವೃತ್ತ ನಿರೀಕ್ಷಕ ವೇಣುಗೋಪಾಲ್, ನಗರ ವೃತ್ತ ನಿರೀಕ್ಷಕ ಸುರೇಶ್ ಅವರು ಮಾತನಾಡಿದರು.ಸಭೆಯಲ್ಲಿ ಅಂಜುಮನ್ ಸಂಸ್ಥೆಯ ಪೀರ್‌ಷರೀಫ್, ಸೈಯದ್‌ಗೌಸ್, ಮಾಜಿ ಉಪ ಮೇಯರ್ ಮಹಮದ್ ಸನಾವುಲ್ಲಾ, ವಿಎಚ್‌ಪಿ ಮುಖಂಡ ಹಾ. ರಾಮಪ್ಪ,  ಶ್ರೀರಾಮಸೇನೆ ಮುಖಂಡ ಮಂಜುನಾಥ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ವಿ. ಹರೀಶ್‌ಬಾಬು, ವೀರಶೈವ ಮುಖಂಡ ದೇವರಾಜ್, ಜೆಡಿಎಸ್ ಮುಖಂಡ ಕೃಷ್ಣೇಗೌಡ,  ಬಿ.ಟಿ. ನಾಗರಾಜ್, ವಿ. ಕದಿರೇಶ್,  ಮುರ್ತೂಝಾ ಖಾನ್, ಈಶ್ವರಪ್ಪ, ಬಸವರಾಜ್ ಇದ್ದರು.

ಅಸಮರ್ಪಕ ವಿದ್ಯುತ್: ಪ್ರತಿಭಟನೆ: ಮೆಸ್ಕಾಂ ಕಾರ್ಯ ವೈಖರಿ ಖಂಡಿಸಿ ರೈತರು ಮಲೆನಾಡು ಗೆಳೆಯರ ಬಳಗದ ವತಿಯಿಂದ ಸೋಮವಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಳಗದ ಅಧ್ಯಕ್ಷ ಬಿ.ಪಿ. ರಾಮಚಂದ್ರ ಮಾತನಾಡಿ, ರೈತರು, ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಇಲಾಖೆ ಅನಗತ್ಯ ವಿದ್ಯುತ್ ನಿಲುಗಡೆ ಮಾಡಿ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದರು.ಮಾಜಿ ಗ್ರಾ.ಪಂ. ಅಧ್ಯಕ್ಷ ಪಿ. ರಮೇಶ, ಅರಸಾಳು ಗ್ರಾ.ಪಂ. ಉಪಾಧ್ಯಕ್ಷ ಪುಟ್ಟಪ್ಪ, ಸದಸ್ಯ ಬಸವರಾಜ, ಕೊಳವಂಕ ಜಗದೀಶ,  ರಾಮಪ್ಪನಸರ ಮಂಜಪ್ಪ ಹಾಗೂ ಜಯಂತ್ ಹಾಜರಿದ್ದರು.ಕೊಳವಂಕ, ಬೆಳ್ಳೂರು, ಬುಕ್ಕಿವರೆ, ಅಮೃತ, ಹೆದ್ದಾರಿಪುರ, ತಳಲೆ, ವಡಾಹೊಸಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT