ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ

Last Updated 5 ಏಪ್ರಿಲ್ 2013, 7:07 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪುರಸ್ಕಾರ ಪಡೆಯುವ ಸ್ಕೌಟ್ಸ್ ಮತ್ತು ಗೌಡ್ಸ್ ಜಿಲ್ಲಾ ಮಟ್ಟದ ಮಕ್ಕಳ 4 ದಿನಗಳ ತರಬೇತಿ ಶಿಬಿರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ ಚಾಲನೆ ನೀಡಿದರು.

ಈ ಶಿಬಿರದಲ್ಲಿ ರಾಜ್ಯ ಪಾಲಕ ಪ್ರಶಸ್ತಿ ಪಡೆಯಲು ನಡೆಯುವ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ. ಪ್ರಥಮ ಸೋಪಾನ್, ದ್ವಿತೀಯ ಸೋಪಾನ್, ತೃತೀಯ ಸೋಪಾನ್ ಪ್ರಶಸ್ತಿ ಪಡೆದ ಮಕ್ಕಳಿಗೆ ಈ ತರಬೇತಿ ನೀಡಲಾಗುವುದು. ಜಿಲ್ಲೆಯ 80 ಮಕ್ಕಳು ಪಾಲ್ಗೊಂಡಿದ್ದಾರೆ.

ಶಿಬಿರದಲ್ಲಿ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ರೆಕ್ಟರ್ ಪಾ. ರೆಜ್ಜಿ, ಸ್ಕೌಟ್ ಮತ್ತು ಗೌಡ್ಸ್ ಜಿಲ್ಲಾ ಆಯುಕ್ತ ರಾಘವೇಂದ್ರ, ಜಿಲ್ಲಾ ಆಯುಕ್ತರು (ಗೈಡ್) ನಾಗರತ್ನ ಅನಪೂರ, ತರಬೇತಿದಾರರಾದ ಬಸವರಾಜ.ಡಿ. ಸುಲೋಜನಾ ಬೆಂಜಮಿನ್ ಇದ್ದರು.

ನೋಂದಣಿಗೆ ಸಲಹೆ
ಯಾದಗಿರಿ:
ಮೇ  5 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲು ಇಚ್ಫೆವುಳ್ಳ ಗುಲ್ಬರ್ಗ, ಬೀದರ, ರಾಯಚೂರ, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಮಾಜಿ ಸೈನಿಕರು ತಮ್ಮ ಹೆಸರು ಹಾಗೂ ವಿವರಗಳನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಗುಲ್ಬರ್ಗ ಇಲ್ಲಿ ನೋಂದಾಯಿಸಲು ಕೋರಲಾಗಿದೆ.

ಏಪ್ರಿಲ್ 15 ವರೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08472-225003 ಇಲ್ಲಿ ಸಂಪರ್ಕಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ  ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT