ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್: ಮಹೇಶ್, ಅನಕಾಗೆ ಸೋಲು

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ದೋಹಾ (ಐಎಎನ್‌ಎಸ್): ಭಾರತದ ಮಹೇಶ್ ಮನಗಾಂವ್ಕರ್ ಹಾಗೂ ಅನಕಾ ಅಲಂಕಮೊನಿ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡರು.

ಈಜಿಪ್ಟ್‌ನ ಎರಡನೆ ಶ್ರೇಯಾಂಕದ ಆಟಗಾರ ಮಹಮ್ಮದ್ ಅಬುಯೆಲ್‌ಗರ್ 10-12, 8-11, 11-9, 12-10, 12-10ರಲ್ಲಿ  ಮಹೇಶ್‌ಗೆ ಸೋಲುಣಿಸಿದರು. ಇದಕ್ಕಾಗಿ 90 ನಿಮಿಷ ಹೋರಾಟ ನಡೆಸಿದರು.

ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕೇವಲ 37 ನಿಮಿಷದಲ್ಲಿ ಹೋರಾಟ ಕೊನೆಗೊಳಿಸಿದ ಅನಕಾ 4-11, 8-11, 11-5, 9-11ರಲ್ಲಿ ಯಾತಾರಿಬ್ ಅದೆಲ್ ಎದುರು ಶರಣಾದರು. ಸಮರ್ಥ ಪ್ರದರ್ಶನ ನೀಡುವಲ್ಲಿ ವಿಫಲವಾದ ಅನಕಾಗೆ ಒಂದು ಸೆಟ್‌ನಲ್ಲಿ ಮಾತ್ರ ಗೆಲುವು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT