ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ಗ್ಹೆಕರ್ಟ್: ಹೊಸ ತಯಾರಿಕಾ ಘಟಕ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಿಟ್ಜರ್‌ಲೆಂಡ್ ಮೂಲದ ಸ್ಟಾರ್‌ಗ್ಹೆಕರ್ಟ್ ಕಂಪೆನಿಯು ದೇವನಹಳ್ಳಿ ಬಳಿ ರೂ. 50 ಕೋಟಿ ವೆಚ್ಚದಲ್ಲಿ  ಹೊಸ ಯಂತ್ರೋಪಕರಣ ತಯಾರಿಕಾ ಘಟಕ ಪ್ರಾರಂಭಿಸಲಿದೆ. ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಬರ್‌ಹಾರ್ಡ್ ಸ್ಕೋಪೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕ ಸರ್ಕಾರ ಈ ಘಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ ಎಂದರು.

‘ಡಬ್ಲ್ಯುಎಂಡಬ್ಲ್ಯು’ ಶ್ರೇಣಿಯ ಈ ಹೊಸ ತಯಾರಿಕಾ ಘಟಕದಲ್ಲಿ  ಟ್ರಕ್, ಟ್ಯಾಕ್ಟರ್, ಅರ್ಥ್ ಮೂವರ್ಸ್, ಟರ್ಬೈನ್ ಬ್ಲೇಡ್, ಪವನ ವಿದ್ಯುತ್ ಮತ್ತು ಇತರೆ ವಿದ್ಯುತ್ ಉತ್ಪಾದನಾ ಯಂತ್ರಗಳನ್ನು ತಯಾರಿಸಲಾಗುವುದು ಎಂದು ಅವರು ಹೇಳಿದರು. 

‘ಉದ್ದೇಶಿತ ಘಟಕ ಮುಂದಿನ 24 ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಸುಮಾರು 200 ಜನ ತಾಂತ್ರಿಕ ಪರಿಣತರಿಗೆ ನೇರವಾಗಿ ಉದ್ಯೋಗ ಲಭಿಸಲಿದೆ. ಪ್ರಾರಂಭದಲ್ಲಿ ಜರ್ಮನಿಯಿಂದ ಯಂತ್ರಗಳನ್ನು ಆಮದು ಮಾಡಿಕೊಂಡು ದೇಶೀಯ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತಯಾರಿಸಲಾಗುವುದು.  ನಂತರ ಚೀನಾ ಸೇರಿದಂತೆ ಏಷ್ಯಾದ ಹಲವು ದೇಶಗಳಿಗೆ ರಫ್ತು ಮಾಡುವ ಯೋಜನೆ ಇದೆ’ ಎಂದು ಕಂಪೆನಿಯ ಉಪಾಧ್ಯಕ್ಷ ವಾಲ್ಟರ್ ಬ್ರೊಷ್ ಅಭಿಪ್ರಾಯಪಟ್ಟರು. 

‘ಕಂಪೆನಿಯು ಈಗಾಗಲೇ ರೂ.6 ಕೋಟಿ ವೆಚ್ಚದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ‘ತಾಂತ್ರಿಕ ಕೇಂದ್ರ’ ತೆರೆದಿದೆ. ಈ ಕೇಂದ್ರದಲ್ಲಿ ಸಾರಿಗೆ, ವಿದ್ಯುತ್ ಉತ್ಪಾದನಾ ಯಂತ್ರ, ವಾಹನಗಳ ಬಿಡಿಭಾಗ, ಕೃಷಿ ಸಲಕರಣೆಗಳನ್ನು  ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದರು. ‘ಪೀಣ್ಯಾ ಕೇಂದ್ರದ ಸಹಭಾಗಿತ್ವದಲ್ಲಿ ಉದ್ದೇಶಿತ ಹೊಸ ತಯಾರಿಕಾ ಘಟಕ ಕಾರ್ಯನಿರ್ವಹಿಸಲಿದೆ’  ಎಂದು  ಸ್ಟಾರ್‌ಗ್ಹೆಕರ್ಟ್‌ನ ಭಾರತೀಯ ಮಾರುಕಟ್ಟೆಯ ವ್ಯವಸ್ಥಾಪಕ ನಿರ್ದೇಶಕ ಎ.ಎನ್. ಚಂದ್ರಮೌಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT