ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೀವ್ ಜಾಬ್ಸ್ ಅಂತ್ಯಸಂಸ್ಕಾರ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಕ್ಯಾನ್ಸರ್‌ನಿಂದ ಇತ್ತೀಚೆಗೆ ಮೃತಪಟ್ಟ ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಅಂತ್ಯಸಂಸ್ಕಾರ ಶುಕ್ರವಾರ ಖಾಸಗಿಯಾಗಿ ನೆರವೇರಿತು ಎಂದು ಮಾಧ್ಯಮ ವರದಿ ತಿಳಿಸಿದೆ.

`ಅದೊಂದು ಸಣ್ಣ ಕಾರ್ಯಕ್ರಮವಾಗಿತ್ತು~ ಎಂದು ಜಾಬ್ಸ್ ಕುಟುಂಬಕ್ಕೆ ಆಪ್ತರಾದ ವ್ಯಕ್ತಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ `ವಾಲ್‌ಸ್ಟ್ರೀಟ್ ಜರ್ನಲ್~ ವರದಿ ಮಾಡಿದೆ.

ಆದರೆ ಆ ವ್ಯಕ್ತಿ ಜಾಬ್ಸ್ ಕುಟುಂಬದ ಖಾಸಗಿತನ ಕಾಪಾಡುವ ಸಲುವಾಗಿ, ಅಂತ್ಯಸಂಸ್ಕಾರ ನಡೆದ ಸ್ಥಳ ಮತ್ತು ಸಮಯ ಬಹಿರಂಗಪಡಿಸಿಲ್ಲ.

`ಜಾಬ್ಸ್ ಅವರ ಅಸಾಮಾನ್ಯ ಜೀವನಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಯೋಜನೆಯೊಂದನ್ನು ರೂಪಿಸಲಿದ್ದೇವೆ~ ಎಂದು ಆ್ಯಪಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT