ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ರಾಸ್‌ಕಾನ್ ಲೈಂಗಿಕ ಹಗರಣ: ರಾಜಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮಾಜಿ ಮುಖ್ಯಸ್ಥ ಡಾಮಿನಿಕ್ ಸ್ಟ್ರಾಸ್‌ಕಾನ್ ಹೋಟೆಲ್‌ವೊಂದರ ಪರಿಚಾರಿಕೆ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಇಲ್ಲಿಯ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ಇಲ್ಲಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಉದ್ಯೋಗಿಯಾಗಿರುವ 33 ವರ್ಷದ ನಫಿಸ್ಸಾಟು ಡಿಲೊ ಕೋಣೆ ಸ್ವಚ್ಛಗೊಳಿಸಲು ತೆರಳಿರುವ ಸಂದರ್ಭ ಆ ಕೋಣೆಯಲ್ಲಿ ತಂಗಿದ್ದ ಸ್ಟ್ರಾಸ್‌ಕಾನ್  ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಸ್ಟ್ರಾಸ್‌ಕಾನ್ ಸಹ ಡಿಲೊ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ವಿಚಾರಣೆ ನಡೆಸಿದ ಕೋರ್ಟ್ `ಹಣ ನೀಡುತ್ತೇನೆ. ಆದರೆ ಪ್ರಮಾಣ ಬಹಿರಂಗಗೊಳಿಸುವುದಿಲ್ಲ ಎಂದು ಸ್ಟ್ರಾಸ್‌ಕಾನ್ ತಿಳಿಸಿದ ಬಳಿಕ ಇಬ್ಬರೂ ಪರಸ್ಪರ ರಾಜಿಗೆ ಮುಂದಾಗಿದ್ದರಿಂದ ಇದನ್ನು ಗೌಪ್ಯ ಪ್ರಕರಣ ಎಂದು ನಿರ್ಧರಿಸಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ' ಎಂದು ತೀರ್ಪು ನೀಡಿದೆ.
ತೀರ್ಪು ನೀಡುವ ಸಂದರ್ಭ ಸ್ಟ್ರಾಸ್‌ಕಾನ್ ಹಾಜರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT