ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ರಾಸ್‌ಗೆ ಬೌಲಿಂಗ್‌ನದ್ದೇ ಚಿಂತೆ

Last Updated 23 ಫೆಬ್ರುವರಿ 2011, 18:25 IST
ಅಕ್ಷರ ಗಾತ್ರ

ನಾಗಪುರ (ಪಿಟಿಐ): ಇಲ್ಲಿ ನಡೆದ ಹಾಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಜಯವೇನೊ ಸಾಧಿಸಿತು. ಆದರೆ ತಂಡದ ಬೌಲಿಂಗ್ ವಿಭಾಗದಲ್ಲಿ ಕಂಡು ಬಂದ ಕಳಪೆ ಪ್ರದರ್ಶನ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರನ್ನು ಚಿಂತೆಗೀಡು ಮಾಡಿದೆ.

‘ಬ್ಯಾಟ್ಸ್‌ಮನ್‌ಗಳು ಉತ್ತಮ ಆಟವಾಡಿದರು. ಆದರೆ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅದರಲ್ಲೂ ಕೊನೆಯ ಹತ್ತು ಓವರ್‌ಗಳಲ್ಲಿ ಎದುರಾಳಿ ತಂಡಕ್ಕೆ ರನ್ ಹೊಳೆ ಗಳಿಸಲು ಅವಕಾಶ ಮಾಡಿಕೊಟ್ಟೆವು’ ಎಂದು ಸ್ಟ್ರಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಹಾಲೆಂಡ್ ತಂಡಕ್ಕೆ 292 ರನ್ ಗಳಿಸಲು ಅವಕಾಶ ಮಾಡಿಕೊಟ್ಟೆವು. ಸಾಕಷ್ಟು ಕ್ಯಾಚ್‌ಗಳನ್ನು ಕೈಚಿಲ್ಲಿದೆವು. ಕ್ಷೇತ್ರ ರಕ್ಷಣೆ ವಿಭಾಗದಲ್ಲೂ ಹೇಳಿಕೊಳ್ಳುವಂಥ ಪ್ರದರ್ಶನ ತೋರಲಿಲ್ಲ. 240ರಿಂದ 250 ರನ್‌ಗಳಿಗೆ ಎದುರಾಳಿ ತಂಡವನ್ನು ಕಟ್ಟಿ ಹಾಕಬೇಕು ಎನ್ನುವ ನಮ್ಮ ನಿರ್ಧಾರ ಫಲಿಸಲಿಲ್ಲ. ಹಾಲೆಂಡ್‌ನ ಆಟಗಾರರಿಗೆ ಒಂದು ಹಾಗೂ ಎರಡು ರನ್‌ಗಳನ್ನು ಸರಾಗವಾಗಿ ನೀಡಿದೆವು. ಆದ್ದರಿಂದ ಆ ತಂಡ ಬೃಹತ್ ಮೊತ್ತ ಪೇರಿಸಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT