ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಗೆ ಸ್ಥಾನಮಾನ ನೀಡಿದ ವಚನಕಾರರು

Last Updated 10 ಮಾರ್ಚ್ 2011, 9:15 IST
ಅಕ್ಷರ ಗಾತ್ರ

ಹಿರಿಯೂರು: ನಿರಂತರ ಶೋಷಣೆಗೆ ಒಳಗಾಗಿದ್ದ ಮಹಿಳೆಯರಿಗೆ ವಚನಕಾರರ ಕಾಲದಲ್ಲಿ ಸ್ವಲ್ಪಮಟ್ಟಿನ ಸಮಾನ ಸ್ಥಾನ ಕಲ್ಪಿಸಲಾಗಿತ್ತು ಎಂದು ಗಿರೀಶ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಎಂ.ಎನ್. ಸೌಭಾಗ್ಯವತಿದೇವರು ತಿಳಿಸಿದರು.

ನಗರದ ಗಿರೀಶ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ವಚನಕಾರರು ಅನುಭವ ಮಂಟಪದಲ್ಲಿ ಸೂಕ್ತ ಸ್ಥಾನ ಕಲ್ಪಿಸದಿದ್ದರೆ ಅಕ್ಕಮಹಾದೇವಿ ಯಂತಹ ಶ್ರೇಷ್ಠ ಮಹಿಳೆಯರು ಬೆಳಕಿಗೆ ಬರುತ್ತಿರಲಿಲ್ಲ. ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧೀಜಿಯವರು ಮಹಿಳೆಯರಿಗೆ ವಿಶೇಷ ಗೌರವ ಕೊಟ್ಟಿದ್ದರು ಎಂದು ಅವರು ಹೇಳಿದರು.

ಭಾರತದಲ್ಲಿ ಒಂದೆಡೆ ಸ್ತ್ರೀಯರನ್ನು ಪೂಜಿಸುತ್ತಿದ್ದರೆ, ಇನ್ನೊಂದೆಡೆ ಸಹಿಸಲಾಸಧ್ಯ ದೌರ್ಜನ್ಯ ನಡೆಯುತ್ತಿದೆ. ಚಿಕ್ಕವಳಿದ್ದಾಗ ತಂದೆ-ತಾಯಿಯರ, ವಿವಾಹದ ನಂತರ ಗಂಡನ, ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರುವುದು ಹೆಣ್ಣು ಪರಾವಲಂಬಿ ಆಗಲು ಕಾರಣ. ಸ್ವಂತ ಶಕ್ತಿಯ ಮೇಲೆ ಬದುಕು ನಡೆಸುವುದನ್ನು ಹೆಣ್ಣುಮಕ್ಕಳು ಕಲಿಯಬೇಕು ಎಂದು ಹಿರಿಯ ವಕೀಲರಾದ ಅಸ್ಗರ್‌ವುನ್ನೀಸಾ ಕರೆ ನೀಡಿದರು.

ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಹಕ್ಕಿದೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಕಾಲ ಈಗಿಲ್ಲ. ಲಿಂಗ ತಾರತಮ್ಯ ಸಲ್ಲದು ಎಂದು ವಕೀಲರಾದ ಟಿ.ಎಸ್. ಗಿರಿಜಾ ತಿಳಿಸಿದರು.ಕೇವಲ ಅಡುಗೆ ಮನೆಗೆ ಸೀಮಿತಳಾಗಿದ್ದ ಹೆಣ್ಣು, ತೊಟ್ಟಿಲು ತೂಗುವುದರ ಜತೆಗೆ ದೇಶವನ್ನು ಕೂಡಾ ಆಳಬಲ್ಲಳು ಎನ್ನುವದನ್ನು ಸಾಬೀತುಪಡಿಸಿದ್ದಾಳೆ. ಹೆಣ್ಣು ಪುರುಷ ದ್ವೇಷಿಯಲ್ಲ. ಸ್ತ್ರೀ-ಪುರುಷರಿಬ್ಬರೂ ಪರಸ್ಪರ ಗೌರವಿಸುವ ಮೂಲಕ ಬದುಕು ನಡೆಸಿದರೆ ನೆಮ್ಮದಿ ಇರುತ್ತದೆಂದು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ.ಎ. ಸುಧಾ ಹೇಳಿದರು.

ಡಿ. ವೇದಾ, ಎಸ್. ಮಂಜುಳಾ ಹಾಜರಿದ್ದರು. ಕಾರ್ಯಕ್ರಮವನ್ನು ಪುರುಷ ಪ್ರಶಿಕ್ಷಣಾರ್ಥಿಗಳು ಆಯೋಜಿಸಿದ್ದು ವಿಶೇಷವಾಗಿತ್ತು. ಚಿದಾನಂದ ಸ್ವಾಗತಿಸಿದರು. ಮನು ವಂದಿಸಿದರು. ಸಂತೋಷ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT