ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆ ಮಧ್ಯೆಯೂ ಪ್ರಗತಿ

ವಾಣಿಜ್ಯ ಲೋಕಕ್ಕೆ ಪ್ರಧಾನಿ ಪ್ರಶಂಸೆ
Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸುಧಾರಣಾ ನೀತಿ ಗಳನ್ನು ರೂಪಿಸಲು ಮತ್ತು ತ್ವರಿತಗತಿ ಯಲ್ಲಿ ಜಾರಿಗೆ ತರಲು  ರಾಜಕೀಯ ವಾಗಿ ಸಹಮತ ವ್ಯಕ್ತವಾಗದೇ ಇರು ವುದೇ ದೊಡ್ಡ ಅಡ್ಡಿಯಾಗಿದೆ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ವಿಷಾದಿ ಸಿದರು.

ಕಡತಗಳ ಪರಿಶೀಲನೆಯಲ್ಲಿ ಕೆಂಪು ಪಟ್ಟಿಯ ಅಡೆತಡೆ, ತೆರಿಗೆ ಕಾನೂನು ಗಳು ಮತ್ತು ನಿಯಂತ್ರಣ  ಕ್ರಮಗಳು ಹಾಗೂ ಹತ್ತಾರು ಬಗೆಯ ಪ್ರಕ್ರಿಯೆಗಳ ಕಾರಣದಿಂದಾಗಿ ದೇಶದ ವಾಣಿಜ್ಯೋ ದ್ಯಮಿಗಳು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಬಾರಿ ಆತಂಕಕ್ಕೆ ಒಳಗಾಗು ತ್ತಿರುವುದು ತಮಗೂ ಅರ್ಥವಾಗುತ್ತಿದೆ.

ಆದರೆ, ಈ ಎಲ್ಲ ಸಮಸ್ಯೆಗಳಿಗೂ, ಅಡೆ ತಡೆಗಳಿಗೂ ಕ್ಷಿಪ್ರಗತಿಯಲ್ಲಿ ಪರಿಹಾರ ಕಂಡುಕೊಳ್ಳೋಣ. ಸುಧಾರಣಾ ಕ್ರಮಗ ಳನ್ನು ವೇಗವಾಗಿ ಜಾರಿಗೆ ತರೋಣ ಎಂದರೆ ರಾಜಕೀಯವಾಗಿ ಸಹಮತವೇ ವ್ಯಕ್ತವಾಗುತ್ತಿಲ್ಲ. ಹಾಗಾಗಿಯೇ ಈ ಎಲ್ಲ ಸವಾಲುಗಳನ್ನು ಎದುರಿಸುವುದು ಕಠಿಣ ವಾಗಿದೆ. ಅದೇನೇ ಇದ್ದರೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆಯ ಮಾತನಾಡಿದರು.

ಇಲ್ಲಿ ಶುಕ್ರವಾರ ‘ನಾಯಕತ್ವ ಶೃಂಗಸಭೆ’ಯಲ್ಲಿ ಮಾತನಾಡಿ ಅವರು, ಇಷ್ಟೆಲ್ಲ ಸಮಸ್ಯೆ ಮತ್ತು ಸ್ಪರ್ಧೆಗಳ ನಡುವೆಯೂ ಪ್ರಗತಿಯಲ್ಲಿ ಹಾದಿಯಲ್ಲಿ ಮುನ್ನಡೆಯು ತ್ತಿರುವ ವಾಣಿಜ್ಯೋದ್ಯಮಿಗಳ ಸಮುದಾಯ ವನ್ನು ಪ್ರಶಂಸಿಸಲೇಬೇಕು ಎಂದರು.

ದೇಶದ ಒಟ್ಟಾರೆ ಆಂತರಿಕ ಉತ್ಪಾ ದನೆ (ಜಿಡಿಪಿ) ಶೇ 5ರಷ್ಟು ಕೆಳ ಮಟ್ಟದ ಲ್ಲಿರುವುದಕ್ಕೆ ಬಹಳಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎರಡು ದಶಕಗಳ ಹಿಂದೆ ಪಂಚವಾರ್ಷಿಕ ಯೋಜನೆಯಲ್ಲಿ ಶೇ 5ರಷ್ಟು ಬೆಳವಣಿ ಗೆಯೇ ದೇಶದ ಗುರಿಯಾಗಿದ್ದಿತು ಎಂದು ಹೇಳುವ ಮೂಲಕ ಸದ್ಯದ ಪ್ರಗತಿಯ ಪ್ರಮಾಣ ನಿರಾಶಾದಾಯಕವಲ್ಲ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT