ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆ ಮೆಟ್ಟಿ ನಿಲ್ಲುವ ಗುಣ ಬೆಳೆಸಿಕೊಳ್ಳಿ

Last Updated 4 ಅಕ್ಟೋಬರ್ 2011, 8:20 IST
ಅಕ್ಷರ ಗಾತ್ರ

ಭಾಲ್ಕಿ: ಇದು ಜ್ಞಾನದ ಸ್ಪರ್ಧಾತ್ಮಕ ಯುಗ. ಇಲ್ಲಿ ಗುಣಮಟ್ಟಕ್ಕೆ ಮಾತ್ರ ಬೆಲೆ. ಹಾಗಾಗಿ ಸ್ಪರ್ಧೆಗಳನ್ನು ಧೈರ್ಯ ಮತ್ತು ಆತ್ಮಬಲದಿಂದ ಎದುರಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಹನಮಂತರಾವ ಚವ್ಹಾಣ ನುಡಿದರು.

ಸರಸ್ವತಿ ವಿದ್ಯಾ ಮಂದಿರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ಪಾಲಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಗ್ರಂಥಾಲಯಕ್ಕೆ ಹತ್ತು ಸಾವಿರ ರೂ ದೇಣಿಗೆಯನ್ನು ಇದೇ ಸಂದರ್ಭದಲ್ಲಿ ಚವ್ಹಾಣ ನೀಡಿದರು.

ನಗರ ಠಾಣೆಯ ಸಿಪಿಐ ಎನ್.ಬಿ. ಮಠಪತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಬೇಕು. ಸತತ ಅಧ್ಯಯನದ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು. ಉತ್ತಮ ಹವ್ಯಾಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಪ್ರೊ. ನರವೀರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
 
ಹುಮನಾಬಾದ ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಈಈ ಸಿ.ಎಸ್. ಪಾಟೀಲ, ಪುರಸಭೆ ಸದಸ್ಯ ಬಸವರಾಜ ಬೋರಡೆ, ಸಂಸ್ಥೆಯ ಅಧ್ಯಕ್ಷ ಅವಿನಾಶ ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ಅಂಕುಶ ಢೋಲೆ ವೇದಿಕೆಯಲ್ಲಿ ಇದ್ದರು. ಪ್ರಾಚಾರ್ಯ ಶಿವಕುಮಾರ ಕಾಂಜೋಳಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT