ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆಗಳು ಮಾನಸಿಕ ಬೆಳವಣಿಗೆಗೆ ಪೂರಕ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ ಪತ್ರಿಕಾ ಸಮೂಹವು ನಗರದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ `ಬ್ರೇನ್ ಅಂಡ್ ಬೀಟ್ಸ್~ ರಸಪ್ರಶ್ನೆ ಮತ್ತು ಸಮೂಹ ನೃತ್ಯ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಶನಿವಾರ ನಡೆಯಿತು.

ನಗರದ ವಿವಿಧ ಕಾಲೇಜಿನಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಎರಡು ದಿನದ ಸ್ಪರ್ಧೆಯಲ್ಲಿ ಬಹಳ ಉತ್ಸುಕತೆಯಿಂದ ಪಾಲ್ಗೊಂಡಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ 88 ತಂಡಗಳು ಭಾಗವಹಿಸಿದ್ದರೆ, ಸಮೂಹ ನೃತ್ಯದಲ್ಲಿ ಒಟ್ಟು 60 ತಂಡಗಳು ಪ್ರತಿಭಾ ಪ್ರದರ್ಶನ ನೀಡಿದವು. ರಸಪ್ರಶ್ನೆ ಸ್ಪರ್ಧೆಯಲ್ಲಿ ಮೂವರು ಸದಸ್ಯರಿರುವ ತಂಡವಿದ್ದರೆ, ನೃತ್ಯ ಸ್ಪರ್ಧೆಯ ತಂಡವು 6 ಸದಸ್ಯರನ್ನು ಒಳಗೊಂಡಿತ್ತು.

ರಸಪ್ರಶ್ನೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಪ್ರಥಮ), ಪಿಇಎಸ್ ತಾಂತ್ರಿಕ ಸಂಸ್ಥೆ (ದ್ವಿತೀಯ), ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು (ತೃತೀಯ), ಎಪಿಎಸ್ ಎಂಜಿನಿಯರಿಂಗ್ ಕಾಲೇಜು (ಸಮಾಧಾನಕರ) ಬಹುಮಾನ ಪಡೆದುಕೊಂಡರೆ, ಲಘು ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜು (ಪ್ರಥಮ), ಪಿಇಎಸ್ ಪದವಿ ಕಾಲೇಜು (ದ್ವಿತೀಯ), ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು (ತೃತೀಯ),ನ್ಯೂ ಹೊರೈಜನ್ ಎಂಜಿನಿಯರಿಂಗ್ ಕಾಲೇಜು (ಸಮಾಧಾನಕರ) ವಿದ್ಯಾರ್ಥಿಗಳಿಗೆ ಬಹುಮಾನ ಲಭಿಸಿತು. ಇನ್ನು ಆಧುನಿಕ ಶೈಲಿಯ ನೃತ್ಯ ಪ್ರಕಾರದಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು (ಪ್ರಥಮ), ಇಂಡೋ ಏಷಿಯನ್ ಅಡೆಮಿ (ದ್ವಿತೀಯ), ಕ್ರೈಸ್ಟ್ ಕಾಲೇಜು (ತೃತೀಯ) ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡರು.

ಬಹುಮಾನ ವಿತರಿಸಿ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, `ನೃತ್ಯ ಸ್ಪರ್ಧೆಯಿಂದ ದೈಹಿಕ ಸ್ವಾಸ್ಥ್ಯ ಹೆಚ್ಚಾದರೆ, ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲಿ ರಸಪ್ರಶ್ನೆ ಸ್ಪರ್ಧೆಯು ಪೂರಕವಾಗಿದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕರಿಸುವ ಇಂತಹ ಸ್ಪರ್ಧೆಗಳು ಉಪಯುಕ್ತವಾಗಿದೆ~ ಎಂದು ಶ್ಲಾಘಿಸಿದರು.

ಕಾರ್ಯಕ್ರಮಕ್ಕೆ `ಬ್ರ್ಯಾಂಡ್ ಫ್ಯಾಕ್ಟರಿ~ ಮತ್ತು `ಸ್ಪ್ಲಾಷ್~ಕಂಪೆನಿಗಳು ಪ್ರಾಯೋಜಕತ್ವ ನೀಡಿದ್ದವು. ಪ್ರಸರಣಾ ವಿಭಾಗದ ಡಿಜಿಎಂ ಕಿಶೋರ್ ಗೌಡ್,  ಸಹಾಯಕ ವ್ಯವಸ್ಥಾಪಕಿ ಶಾಂತಿ ಮುರಳೀಧರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT