ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಷ್ಟ ಚಿತ್ರಣ ನೀಡದ ಐಐಪಿ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಅರ್ಥ ವ್ಯವಸ್ಥೆಯ ನಿಜವಾದ ಚಿತ್ರಣ ನೀಡದಿರುವುದರಿಂದ ಅದರಲ್ಲಿ ಬದಲಾವಣೆ ತರುವ ಅಗತ್ಯ ಇದೆ~ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ  (ಸಿಐಐ) ನಿಯೋಜಿತ ಅಧ್ಯಕ್ಷ ಆದಿ ಬಿ. ಗೋದ್ರೆಜ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನಡೆದ `ಸಿಐಐ~ನ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ನಿಧಾನ ಗತಿಯ ಆರ್ಥಿಕ ಬೆಳವಣಿಗೆಯನ್ನು `ಐಐಪಿ~ಯು ಉತ್ಪ್ರೇಕ್ಷೆಗೊಳಿಸಿದರೆ, ತ್ವರಿತವಾಗಿ ವೃದ್ಧಿಯಾಗುವುದನ್ನು ಅತಿ ಕಡಿಮೆ ಎಂಬಂತೆ ಬಿಂಬಿಸುತ್ತದೆ ಎಂದರು. ಡಿಸೆಂಬರ್ ತಿಂಗಳ `ಐಐಪಿ~ಯು ಅಲ್ಪ ಪ್ರಗತಿ ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅರ್ಥ ವ್ಯವಸ್ಥೆಯು ನಿಜವಾಗಿಯೂ ಉತ್ತಮ ಸಾಧನೆ ಮಾಡುತ್ತಿದೆ. ಆದರೆ, `ಐಐಪಿ~ ನೈಜ ಚಿತ್ರಣ ನೀಡುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT