ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಷ್ಟ ನಿಲುವಿನೊಂದಿಗೆ ಕಾಂಗ್ರೆಸ್ ಬರಲಿ

Last Updated 6 ಜನವರಿ 2011, 8:40 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯು ಸೇರಿದಂತೆ ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕು ಎಂಬ ಖಚಿತ ಅಭಿಪ್ರಾಯದೊಂದಿಗೆ ಕಾಂಗ್ರೆಸ್ ಪಕ್ಷ ಮುಂದಾದರೆ ಅತಂತ್ರ ಸ್ಥಿತಿ ಇರುವ ತಾಪಂಗಳಲ್ಲಿ ಅಧಿಕಾರ ರಚಿಸಲು ಒಂದಾಗಬಹುದು ಎಂದು ಜೆಡಿಎಸ್ ಮುಖಂಡ, ಸಂಸದ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ‘ಬೂದನೂರು ಕ್ಷೇತ್ರದಲ್ಲಿ ಬಿಜೆಪಿ ಜೊತೆ, ಪಾಂಡವಪುರದಲ್ಲಿ ರೈತಸಂಘದ ಜೊತೆಗೆ ಸೇರುವ ಭಿನ್ನ ನೀತಿಯನ್ನು ಕಾಂಗ್ರೆಸ್ ಕೈಬಿಟ್ಟು, ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕು ಎಂಬ ಮನಸ್ಸಿನಿಂದ ಆ ಪಕ್ಷ ಮುಂದಾಗಬೇಕು’ ಎಂದು ಬುಧವಾರ ಅಭಿಪ್ರಾಯಪಟ್ಟರು.

ಜಿಲ್ಲಾ, ತಾಲ್ಲೂಕು ಪಂಚಾಯಿತಿಯ ಚುನಾವಣೆಯ ಬಳಿಕ ವಿಜೇತ ಅಭ್ಯರ್ಥಿಗಳ ಜೊತೆಗೆ ಸಭೆಗೂ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸುವ ಮೂಲಕ ಅಭಿವೃದ್ಧಿ ಕುರಿತ ಆ ಪಕ್ಷದ ನಿಲುವಿಗೆ ಸ್ಪಷ್ಟವಾದ ಉತ್ತರವನ್ನು ಮತದಾರರು ನೀಡಿದ್ದಾರೆ. ಅಲ್ಲದೆ, ಜೆಡಿಎಸ್ ಬೆಂಬಲಿಸಿದ ಜಿಲ್ಲೆಯ ಜನತೆಗೂ ನಾವು  ಕೃತಜ್ಞರಾಗಿದ್ದೇವೆ ಎಂದರು.

ಅತಂತ್ರ ಸ್ಥಿತಿ ಇರುವ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಕುರಿತು ಈಗಾಗಲೇ ಪಕ್ಷದ ಮುಖಂಡರಾದ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಸ್ಪಷ್ಟ ತೀರ್ಮಾನದೊಂದಿಗೆ ಕೈಜೋಡಿಸಬೇಕು ಎಂಬುದು ನಮ್ಮ ಅಬಿಪ್ರಾಯ ಎಂದರು. ಅಭಿವೃದ್ಧಿ ವಿಷಯವನ್ನು ಉಲ್ಲೇಖಿಸಿ ಬಿಜೆಪಿ ಮುಖಂಡರು ಮತದಾರರ ಜೊತೆಗೆ ಕಣ್ಣಾಮುಚ್ಚಾಲೆ ಆಡಿದ್ದರು. ಆದರೂ ಮತದಾರರು ಪ್ರಬುದ್ಧರಿದ್ದೇವೆ ಮೆರೆದಿದ್ದಾರೆ. ಇನ್ನಷ್ಟು ಜಿಪಂ ಸ್ಥಾನಗಳು ಜೆಡಿಎಸ್‌ಗೆ ಬರಬೇಕಿತ್ತು. ಆದರೆ, ಮುಖಂಡರು, ಪಕ್ಷದಲ್ಲಿನ ವ್ಯತ್ಯಾಸದಿಂದಲೇ ಈ ಲೋಪವಾಗಿದೆ ಎಂದರು.

ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಸೀರೆ ಹಂಚುವಾಗ ಅನೇಕ ಯೋಜನೆಗಳನ್ನು ಬಿಜೆಪಿ ನಾಯಕರು ಪ್ರಕಟಿಸಿದ್ದರು. ಅವು ಈಗ ಯಾವ ಹಂತದಲ್ಲಿದೆ ಎಂದೂ ಈಗಲಾದರೂ ವಿವರಣೆ ನೀಡಲಿ ಎಂದು ವ್ಯಂಗ್ಯವಾಡಿದರು. ಅಭಿವೃದ್ಧಿಗೆ ಆದ್ಯತೆ: ರಾಜ್ಯ ಸರ್ಕಾರದ ಸಹಕಾರ ಇರಲಿ, ಬಿಡಲಿ. ನಿಯಮಾನುಸಾರ ಬರುವ ಹಣವನ್ನು ಬಳಸಿಕೊಂಡೇ ಜಿಲ್ಲಾ, ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಲು ಕ್ರಮಕೈಗೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವನೆಯು ಒಟ್ಟಾರೆ ಬಿಜೆಪಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ ಅವರು, ಈ ಹಿಂದೆ ದೇವೇಗೌಡರ ಅವಧಿ, ಎಸ್.ಎಂ.ಕೃಷ್ಣರ ಅವಧಿಯಲ್ಲಿ ಚುನಾವಣೆ ನಡೆದಾ ಆಯಾ ಪಕ್ಷಗಳು ಜಯಭೇರಿ ಬಾರಿಸಿದ್ದವು. ಆದರೆ, ಈ ಬಾರಿ ಯಡಿಯೂರಪ್ಪ ಅಧಿಕಾರದಲ್ಲಿ ಇದ್ದರೂ ಬಿಜೆಪಿ ಎಲ್ಲೆಡೆ ಜಯಭೇರಿ ಬಾರಿಸಿಲ್ಲ ಎಂಬುದನು ಗಮನಿಸಬೇಕು ಎಂದರು.ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರು ಹಾಗೂ ಪಕ್ಷದ ಶಾಸಕರು, ಮಾಜಿ ಶಾಸಕರು ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT