ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣ ಶಕ್ತಿ ಉಪನ್ಯಾಸ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇದು ಪರೀಕ್ಷೆಗಳ ಪರ್ವಕಾಲ. ಫೆಬ್ರುವರಿ ಕಳೆದು ಮಾರ್ಚ್ ಬಂತೆಂದರೆ ಸಾಕು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಅವರ ಪಾಲಕರಿಗೂ ಒತ್ತಡ. ಮಗ ಸರಿಯಾಗಿ ಓದುತ್ತಿಲ್ಲ ಅಥವಾ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎನ್ನುವ ಆತಂಕ.

ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್ ಸಂಸ್ಥೆ ಪ್ರಯತ್ನಿಸುತ್ತಿದೆ. ಮಕ್ಕಳ ಸ್ಮರಣ ಶಕ್ತಿಯನ್ನು ಒರೆಗೆ ಹಚ್ಚುವ, ಓದಿದ್ದನ್ನು ಮರೆಯದಂಥ ತಂತ್ರಗಾರಿಕೆಯನ್ನು ಹೇಳಿಕೊಡುತ್ತದೆ.
 
ಈ ನಿಟ್ಟಿನಲ್ಲಿ ಮಕ್ಕಳಿಗೆ  ಸಹಾಯ ಮಾಡಲು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಕ್ಕಳೊಂದಿಗೆ ಸದಾ ಇರುವ ಪಾಲಕರಿಗೂ, ಶಾಲೆಯಲ್ಲಿಯೂ ಈ ತಂತ್ರಗಳನ್ನು ಅಳವಡಿಸಲು ಅನುಕೂಲವಾಗುವಂತೆ ಶಿಕ್ಷಕರಿಗೂ ಉಚಿತ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಶನಿವಾರ (ಫೆ.25) ಸಂಸ್ಥೆಯ ಸಂಸ್ಥಾಪಕ ಕೃಷ್ಣ ಉಪನ್ಯಾಸ ನೀಡಲಿದ್ದಾರೆ.  

ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್, ನಂ 49- 50, 50ಅಡಿ ರಸ್ತೆ, 2ನೇ ಮಹಡಿ, ಎಸ್‌ಜಿಎಸ್ ಆರ್ಕೇಡ್, ನಿರ್ಮಲಾ ಬಸ್ ನಿಲ್ದಾಣ ಹತ್ತಿರ, ಹನುಮಂತನಗರ. ಸಂಜೆ 5.30. ಮಾಹಿತಿಗೆ: 98867 03172 / 95389 97462

ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮ...

ಎಸ್.ನಿಜಲಿಂಗಪ್ಪ ಕಾಲೇಜಿನ ಪ್ರವಾಸೋದ್ಯಮ ವಿಭಾಗ: ಶನಿವಾರ `ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮ-ಅವಕಾಶಗಳು ಮತ್ತು ಸವಾಲುಗಳು~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ: ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ವಿಶ್ವನಾಥ ರೆಡ್ಡಿ.

ಅತಿಥಿಗಳು: ಸಿಎಂಆರ್ ತಾಂತ್ರಿಕ ಸಂಸ್ಥೆ ಅಧ್ಯಕ್ಷ ಪ್ರೊ.ಬೋರ್‌ನಾಥ್ ದತ್ತ, ಕೆಎಲ್‌ಇ ಕಾನೂನು ವಿದ್ಯಾಲಯದ ಪ್ರಾಚಾರ್ಯ ಡಾ.ಜೆ.ಎಂ.ಮಲ್ಲಿಕಾರ್ಜುನಯ್ಯ, ಸಿಟಾಡೆಲ್ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ಉಪೆನ್ ಆನಂದ್. ಸಮಾರೋಪ ಸಮಾರಂಭ

ಉದ್ಘಾಟನೆ: ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಧ್ಯಕ್ಷ ಡಾ.ರಾಮಚಂದ್ರ ಗೌಡ.

ಸ್ಥಳ: ನವರಂಗ್ ಟಾಕೀಸ್ ಹಿಂಭಾಗ, ರಾಜಾಜಿನಗರ 2ನೇ ಬ್ಲಾಕ್. ಬೆಳಿಗ್ಗೆ 10.
ಮಾಹಿತಿಗೆ: 23429782

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT