ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾಗಿ ರಾಜೇಂದ್ರ ಆಯ್ಕೆ

80ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 11 ಸೆಪ್ಟೆಂಬರ್ 2013, 10:45 IST
ಅಕ್ಷರ ಗಾತ್ರ

ಮಡಿಕೇರಿ: ಅಖಿಲ ಭಾರತ 80ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರನ್ನಾಗಿ ಜಿ. ರಾಜೇಂದ್ರ ಅವರು ಸರ್ವಾನುಮತದಿಂದ ಆಯ್ಕೆಯಾದರು.

ಇತ್ತೀಚೆಗೆ ಜಿಲ್ಲಾ ಕಸಾಪ ಕಚೇರಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ  ಟಿ.ಪಿ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಮರಣ ಸಂಚಿಕೆ ಸಮಿತಿಯ ಸಭೆಯಲ್ಲಿ ಜಿ. ರಾಜೇಂದ್ರ ಅವರು ಆಯ್ಕೆಯಾದರು. ಸಮಿತಿಯ ಸಂಪಾದಕರಾಗಿ ಡಾ. ಪ್ರಕಾಶ್ ಕೂಡಿಗೆ ಹಾಗೂ ಸುಬ್ರಾಯ ಸಂಪಾಜೆ ಆಯ್ಕೆಯಾದರು.

ಸಹ ಸಂಪಾದಕರಾಗಿ ಡಾ. ಎಂ.ಬಿ. ರೇಖಾ,  ಬಿ.ಸಿ. ದಿನೇಶ್, ಡಾ.ಜೆ. ಸೋಮಣ್ಣ, ಬಿ.ಆರ್. ಜೋಯಪ್ಪ, ನಾಗೇಶ್ ಕಾಲೂರು, ಡಾ.ಶ್ರೀಧರ ಹೆಗಡೆ, ಕಸ್ತೂರಿ ಗೋವಿಂದಮ್ಮಯ್ಯ, ಸಂಪಾದಕ ಮಂಡಳಿ ಸದಸ್ಯರಾಗಿ ಮೋಹನ್ ಪಾಳೇಗಾರ್, ಉಳಿಯಡ ಡಾಟಿ ಪೂವಯ್ಯ, ಗಿರೀಶ್ ಕಿಗ್ಗಾಲು, ಹರೀಶ್ ಸರಳಾಯ, ಸ್ನೇಹಾ ಬಸಮ್ಮ, ಡಾ.ಕೋರನ ಸರಸ್ವತಿ, ಟಿ.ಸಿ. ತಮ್ಮಯ್ಯ, ಎಲ್.ಎಚ್. ರವಿ, ರಾಮಚಂದ್ರರಾವ್,  ಶ.ಗ. ನಯನತಾರಾ, ಟಿ.ಕೆ.ಜಿ. ಭಟ್, ಕೆ.ಜಿ. ಹರೀಶ್ ಅವರನ್ನು ಆಯ್ಕೆ ಮಾಡಲಾಯಿತು.  ಹಿರಿಯ ಸಾಹಿತಿಗಳಾದ ಡಾ.ಎಂ.ಜಿ. ನಾಗರಾಜ್ ಹಾಗೂ ಎನ್. ಮಹಾಬಲೇಶ್ವರ ಭಟ್ ಅವರನ್ನು ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು. ಸದಸ್ಯರು  ಲೇಖನಗಳನ್ನು ಆಯ್ಕೆ ಮಾಡುವ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಸ್ಮರಣ ಸಂಚಿಕೆ ಸಂಪಾದಕ ಮಂಡಳಿಗೆ ಹೆಚ್ಚುವರಿ ಸದಸ್ಯರನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಪ್ರಧಾನ ಸಂಪಾದಕರಿಗೆ ನೀಡಲಾಯಿತು. ಜಾಹೀರಾತುಗಳನ್ನು ಸಂಗ್ರಹಿಸಲು ಪ್ರತ್ಯೇಕ ಉಪ ಸಮಿತಿಯೊಂದನ್ನು ರಚಿಸುವುದು ಸೂಕ್ತ. ಸ್ಮರಣ ಸಂಚಿಕೆಯು ಜಿಲ್ಲೆ ಹಾಗೂ ರಾಜ್ಯದ ಬೇರೆ ಜಿಲ್ಲೆಗಳ ಬರಹಗಾರರ ಲೇಖನಗಳನ್ನು ಒಳಗೊಂಡಿರಬೇಕೆಂದೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಂಚಿಕೆಯ ಗಾತ್ರ, ಸ್ವರೂಪ, ಪುಟಗಳು ಇತ್ಯಾದಿ ವಿವರಗಳನ್ನು ಮುಂದಿನ ಸಭೆಗಳಲ್ಲಿ ನಿರ್ಧರಿಸುವಂತೆ ಸಭೆ ತೀರ್ಮಾನಿಸಿತು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಎ. ಶಂಷುದ್ದೀನ್ ಹಾಗೂ ಗೌರವ ಕೋಶಾಧಿಕಾರಿ ಇದ್ದರು.  ಮುಂದಿನ ಸಭೆಯನ್ನು ಸೆಪ್ಟೆಂಬರ್ 14ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT