ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಜಾಗ ವಿವಾದ- ಜಿಲ್ಲಾಧಿಕಾರಿಗೆ ಮನವಿ

Last Updated 6 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಕಾರವಾರ: ಹಬ್ಬುವಾಡದಲ್ಲಿ ಸ್ಮಶಾ ನದ ಜಾಗದಲ್ಲಿ ವ್ಯಕ್ತಿಯೊಬ್ಬರು ಕೈಗಾರಿಕೆ ಸ್ಥಾಪಿಸಲು ಮುಂದಾಗಿ ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿರುವು ದನ್ನು ಖಂಡಿಸಿ ನಗರದ ಸೋನಾರ ವಾಡ, ದಳವಿವಾಡಾ, ಹರಿದೇವ ನಗರ ಮತ್ತು ಕಳಸವಾಡದ ಸಾರ್ವಜನಿಕರು ಜಿಲ್ಲಾಧಿಕಾರಿ ಇಂಕಾಂಗ್ಲೊ ಜಮೀರ್ ಹಾಗೂ ನಗರಸಭೆ ಪೌರಾಯುಕ್ತ ಡಾ. ಉದಯಕುಮಾರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಬಾಡ್-2, 1453ಕ ಸರ್ವೇ ನಂಬರ್‌ಗೆ ಸೇರಿದ ಜಾಗದಲ್ಲಿ ಅನಾದಿ ಕಾಲದಿಂದಲು ಸ್ಥಳೀಯರು ಶವ ಸಂಸ್ಕಾರ ಮಾಡುತ್ತ ಬಂದಿದ್ದಾರೆ. ಇಲ್ಲಿ ಶವಸಂಸ್ಕಾರಕ್ಕಾಗಿ ಹತ್ತು ವರ್ಷಗಳ ಹಿಂದೆಯೇ ನಗರಸಭೆ ಇಲ್ಲಿ ಶೆಡ್‌ನ್ನು ನಿರ್ಮಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಸ್ಮಶಾನಕ್ಕೆ ಕಂಪೌಂಡ್ ಗೋಡೆಯೂ ಇಲ್ಲ ಎಂದು ಎಂ.ಯು. ಶೇಖ್ ಎಂಬುವರು ಉಪ ವಿಭಾಗಾಧಿಕಾರಿಗಳಿಗೆ ಆಧಾರ ರಹಿತ ವರದಿಯನ್ನು ನೀಡಿದ್ದಾರೆ. ಈ ಕುರಿತು ಸರಿಯಾದ ವಿಚಾರಣೆ ನಡೆಸದ ಅಧಿಕಾರಿಗಳು ಅರ್ಜಿದಾರರ ವರದಿ ಆಧರಿಸಿ ಸ್ಮಶಾನದ ಜಾಗದಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ದೇಶನದಂತೆ ನಗರ ಸಭೆ ಸಿಬ್ಬಂದಿ `ಶವಸಂಸ್ಕಾರ ನಿಷೇಧಿ ಸಲಾಗಿದೆ~ ಎಂದು  ಶನಿವಾರ ನಾಮ ಫಲಕ ಅಳವಡಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ನಗರಸಭೆ ಸಿಬ್ಬಂದಿ ನಾಮಫಲಕವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸ್ಮಶಾನವಿರುವ ಜಮೀನಿನ ಮಾಲೀಕ ಬಿಕಾಜ ದೇವರಾಯ ರಾಯ್ಕರ್ ಅವರು ಸ್ಮಶಾಸನಕ್ಕೆ ಬಿಟ್ಟುಕೊಟ್ಟಿದ್ದರು. ಈ ಕುರಿತು ಅವರ ಬಳಿ ದಾಖಲೆಗಳೂ ಇವೆ. ಅರ್ಜಿದಾರರನ್ನು ಹೊರತುಪಡಿ ಸಿದರೆ ಬೇರೆ ಯಾರೊಬ್ಬರು ಈ ಸ್ಮಶಾನದ ಕುರಿತು ತಕರಾರು ಮಾಡಿಲ್ಲ. ಅಧಿಕಾರಿಗಳು ವಸ್ತುಸ್ಥಿತಿಯನ್ನು ಅರಿತು ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಳು `ಅಲ್ಲಿ ಏನು ಸಮಸ್ಯೆಯಿದೆ ಎನ್ನುವ ಬಗ್ಗೆ ಪೌರಾಯುಕ್ತರಿಂದ ಮಾಹಿತಿ ಪಡೆದು ಕ್ರಮಕೈಗೊಳ್ಳುತ್ತೇನೆ~ ಎಂದು ಭರವಸೆ ನೀಡಿದರು.

ದೀಪಕ ನಾಯ್ಕ, ವಿಠ್ಠಲ ಸಾವಂತ, ನಾಗೇಶ ಮಡಿವಾಳ, ದಯಾನಂದ ಮಡಿವಾಳ, ಆರ್.ಎನ್.ನಾಯ್ಕ, ನಂದಾ ನಾಯ್ಕ, ಶ್ರೀಪಾದ ಕಳಸ, ಜಗದೀಶ, ಕೃಷ್ಣ ನಾಯ್ಕ. ಟಿ.ಕೆ. ನಾಯ್ಕ, ಶಾಂತಾ ಕಳಸ   ಹಾಜರಿದ್ದರು.
ಮತದಾರರ ಹೆಸರು ಸೇರ್ಪಡೆಗೆ ವಿಶೇಷ ಅಭಿಯಾನ

ಹಳಿಯಾಳ:  ಜಿಲ್ಲಾಧಿಕಾರಿಗಳ  ಆದೇಶ ದನ್ವಯ ಮತದಾರರ ಪಟ್ಟಿಯಲ್ಲಿ ಶೇ 100 ರಷ್ಟು ಮತದಾರರ ಭಾವಚಿತ್ರ ಸೇರ್ಪಡೆಗೊಳಿಸಲು ವಿಶೇಷ  ಅಭಿ ಯಾವನ್ನು ಫೆ.6 ರಿಂದ 12ರ ವರೆಗೆ  ಏರ್ಪಡಿಸಲಾಗಿದೆ.

ಈ ಅಭಿಯಾನದಲ್ಲಿ ಮತದಾರರ ಪಟ್ಟಿಯಲ್ಲಿ ಭಾವಚಿತ್ರ  ಇಲ್ಲದೇ ಇರುವ ಮತದಾರರ ಭಾವಚಿತ್ರ ಪಡೆ ಯಲು ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಭಾವಚಿತ್ರ ಪಡೆಯಲಿದ್ದು, ಮತದಾರರು ತಮ್ಮ ಭಾವಚಿತ್ರವನ್ನು ಫಾರ್ಮ್ ನಂ-8 ರೊಂದಿಗೆ ನೀಡಿ ಮತದಾರರ ಪಟ್ಟಿ ಯಲ್ಲಿ ಸೇರ್ಪಡೆಗೊಳಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಛೇರಿ ಹಳಿಯಾಳ  ದೂರವಾಣಿ ಸಂಖ್ಯೆ 08284-220134 ಅನ್ನು ಸಂಪರ್ಕಿಸಬಹುದಾಗಿದೆ ಎಂದು  ತಹ ಸೀಲ್ದಾರ ಹಳಿಯಾಳರಾದ ಅಜೀಜ ಆರ್.ದೇಸಾಯಿ ಪ್ರಕಟಣೆಯಲ್ಲಿ  ತಿಳಿಸಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT