ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್ ಮಾರಾಟ ಹೆಚ್ಚಳ

ಮೊಬೈಲ್ ಮಾತು
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದೇಶದಲ್ಲೆಗ ಸ್ಮಾರ್ಟ್‌ಫೋನ್‌ಗಳದ್ದೇ ಭರಾಟೆ. ಸ್ಮಾರ್ಟ್‌ಫೋನ್‌ಗಳ ಮಾರಾಟ ಎರಡು ಪಟ್ಟು ಹೆಚ್ಚಿದೆ. ಇದರಿಂದಾಗಿ ದೇಶದ ಒಟ್ಟಾರೆ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆ 2012-13ನೇ ಸಾಲಿನಲ್ಲಿ ಶೇ 14.7ರಷ್ಟು ಪ್ರಗತಿ ಕಂಡಿದ್ದುರೂ35,946 ಕೋಟಿ ವರಮಾನ ದಾಖಲಿಸಿದೆ.  2011-12ನೇ ಸಾಲಿನಲ್ಲಿ ಇದು ರೂ 31,330 ಕೋಟಿಯಷ್ಟಿತ್ತು.

ಈ ಬಾರಿ ಕೊರಿಯಾದ ಹ್ಯಾಂಡ್‌ಸೆಟ್ ತಯಾರಿಯಾ ಕಂಪೆನಿ ಸ್ಯಾಮ್ಸಂಗ್, ನೊಕಿಯಾವನ್ನು ಹಿಂದಿಕ್ಕಿ ಭಾರತದ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ ಎಂದು `ವಾಯ್ಸ ಅಂಡ್ ಡೇಟಾ' ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನದಿಂದ  ತಿಳಿದು ಬಂದಿದೆ.

2012-13ನೇ ಸಾಲಿನಲ್ಲಿ ಸ್ಯಾಮ್ಸಂಗ್‌ನ ಮಾರುಕಟ್ಟೆ ಪಾಲು ಶೇ 43ರಷ್ಟು ಹೆಚ್ಚಿದ್ದುರೂ11,328 ಕೋಟಿ ವರಮಾನ ಗಳಿಸಿದೆ. ಇದೇ ವೇಳೆ ನೊಕಿಯಾದ ಪಾಲು ಶೇ 27.2ಕ್ಕೆ ಕುಸಿದು,ರೂ9,780 ಕೋಟಿ ವರಮಾನ ದಾಖಲಾಗಿದೆ. ನೊಕಿಯಾದ `ಲುಮಿಯಾ' ಸರಣಿ ಸ್ಮಾರ್ಟ್‌ಫೋನ್‌ಗಳು ಉತ್ತಮ ಮಾರಾಟ ಕಂಡಿವೆ. ಆದರೆ, ಡ್ಯುಯಲ್ ಸಿಮ್ ಫೋನ್ ಮಾರುಕಟ್ಟೆಯಲ್ಲಿ ಹಿಂದೆ ಬಿದ್ದಿರುವುದೇ ಕಂಪೆನಿಯ ವರಮಾನ ಕುಸಿಯಲು ಪ್ರಮುಖ ಕಾರಣ ಎಂದು ಈ ಅಧ್ಯಯನ ವಿಶ್ಲೇಷಿಸಿದೆ.

  ಇದೇ ವೇಳೆ ಮೊಬೈಲ್ ಮೌಲ್ಯವರ್ಧಿತ ಸೇವೆಗಳ(ಎಂವಿಎಎಸ್) ಮಾರುಕಟ್ಟೆ  ಪ್ರಸಕ್ತ ವರ್ಷ ಶೇ 15ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆ ಇದ್ದು ರೂ 29,900 ಕೋಟಿ ವರಮಾನ ಅಂದಾಜು ಮಾಡಲಾಗಿದೆ ಎಂದು `ಐಎಎಂಎಐ' ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.

2012ನೇ ಸಾಲಿನಲ್ಲಿ ಮೌಲ್ಯವರ್ಧಿತ ಸೇವೆಗಳ ಮೂಲಕರೂ26,000 ಕೋಟಿ ವರಮಾನ ದಾಖಲಾಗಿತ್ತು. ಅಗ್ಗದ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಿರುವುದು ಮತ್ತು `3ಜಿ' ದತ್ತಾಂಶ ಬಳಕೆ ಶುಲ್ಕ ಕಡಿಮೆಯಾಗಿರುವುದು ಮೊಬೈಲ್ ಮೌಲ್ಯವರ್ಧಿತ ಸೇವೆಗಳ ಮಾರುಕಟ್ಟೆ ವಿಸ್ತರಣೆಗೆ ಪ್ರಮುಖ ಕಾರಣ ಎಂದು ಈ ಅಧ್ಯಯನ ಗಮನ ಸೆಳೆದಿದೆ.

್ಙ5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು ಲಭಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಬಳಕೆದಾರರಿಂದ ಮೌಲ್ಯವರ್ಧಿತ ಸೇವೆಗಳಿಗೆ ಬೇಡಿಕೆ ಹೆಚ್ಚಿದೆ. ಆರೋಗ್ಯ, ಮನರಂಜನೆ, ಶೈಕ್ಷಣಿಕ ಮಾಹಿತಿ ಆಧರಿಸಿದ ಸೇವೆಗಳಿಗೆ ಬೇಡಿಕೆ ಗರಿಷ್ಠ ಮಟ್ಟದಲ್ಲಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವಿಧಿಸಿರುವ ನಿರ್ಬಂಧಗಳು ಮತ್ತು ದುರ್ಬಲ ಡಾಟ ನೆಟ್‌ವರ್ಕ್‌ನಿಂದ `ಎಂವಿಎಎಸ್' ಮಾರುಕಟ್ಟೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ಸೇವಾ ಪೂರೈಕೆ ಕಂಪೆನಿಗಳು ದೂರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT