ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್ ಶಾಪಿಂಗ್

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದೇಶದ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಶೇ 32ರಷ್ಟು ಜನ ತಮ್ಮ ಹ್ಯಾಂಡ್‌ಸೆಟ್ ಮೂಲಕವೇ ಷಾಪಿಂಗ್ ನಡೆಸಲು ಇಷ್ಟಪಡುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ಶೇ 23ರಷ್ಟು ಜನ ತಮ್ಮ ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್ ಬಳಸಿ ಷಾಪಿಂಗ್ ಮಾಡುತ್ತಾರೆ. ಇದಕ್ಕೆ ಹೋಲಿಸಿದರೆ ಸ್ಮಾರ್ಟ್‌ಪೋನ್ ಷಾಪಿಂಗ್ ಹೆಚ್ಚಿದೆ ಎನ್ನುತ್ತಾರೆ ಈ ಅಧ್ಯಯನ ನಡೆಸಿದ `ಹಾವಾಸ್ ಮೀಡಿಯಾ~ ಏಷ್ಯಾ ಪೆಸಿಫಿಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಷ್ಣು ಮೋಹನ್.

`ಹಾವಾಸ್~ ದೇಶದ 2,800 ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸಂಪರ್ಕಿಸಿ ಈ ಅಧ್ಯಯನ ನಡೆಸಿದೆ. ಇವರಲ್ಲಿ ಶೇ 80ರಷ್ಟು ಜನ  `ಸ್ಮಾರ್ಟ್‌ಫೋನ್ ಷಾಪಿಂಗ್~ ಇಷ್ಟಪಟ್ಟಿದ್ದಾರೆ.  ಶೇ 7ರಷ್ಟು ಜನ ಮಾತ್ರ ಷಾಪಿಂಗ್‌ಗೆ `ಟ್ಯಾಬ್ಲೆಟ್~ ಉತ್ತಮ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT