ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ!

Last Updated 7 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಕೆನಡಾ ಮೂಲದ `ಬ್ಲ್ಯಾಕ್‌ಬೆರಿ~ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ `ರಿಸರ್ಚ್ ಇನ್ ಮೋಷನ್~ (ರಿಮ್) ಮತ್ತು ದೂರವಾಣಿ ಸೇವಾ ಸಂಸ್ಥೆ `ವೊಡಾಫೋನ್~ ಇತ್ತೀಚೆಗೆ ಜಂಟಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ-ಉತ್ತರಗಳನ್ನು ಮೊಬೈಲ್ ಮೂಲಕ ನೀಡುವುದು ಈ ಒಪ್ಪಂದದ ಆಶಯ. ಇದಕ್ಕೆ ಸಂಬಂಧಿಸಿದ ಪಠ್ಯವನ್ನು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಎಂಎಸ್) ಸಂಸ್ಥೆ ಒದಗಿಸಲಿದೆ.

ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ನಲ್ಲಿ ವೊಡಾಫೋನ್ ಸಂಪರ್ಕ ಸೇವೆ ಬಳಸುವ ಗ್ರಾಹಕರಿಗೆ ಮಾತ್ರ ಉಚಿತವಾಗಿ ಈ ಸೇವೆ ಲಭಿಸಲಿದೆ. ಇದಕ್ಕಾಗಿ ಚಂದಾದಾರರು ತಮ್ಮ ಮೊಬೈಲ್‌ಗೆ `ಬ್ಲಾಕ್‌ಬೆರಿ ಸ್ಟಡಿ ಬಡ್ಡಿ~ ಎಂಬ ಅಪ್ಲಿಕೇಷನ್ ಅನುಸ್ಥಾಪಿಸಿಕೊಳ್ಳಬೇಕು.
 
ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳಬಹುದು. ಜತೆಗೆ ಪ್ರಶ್ನೆ-ಉತ್ತರಗಳು ಮತ್ತು ಮಾಹಿತಿ ತುಣುಕು ಅಂಗೈಯಲ್ಲೇ ಲಭ್ಯವಾಗಲಿವೆ ಎನ್ನುತ್ತಾರೆ `ರಿಮ್~ನ  ಮಾರುಕಟ್ಟೆ ನಿರ್ದೇಶಕ ಹಿತೇಶ್ ಷಾ. 

ಪುಣೆ ಮೂಲದ `ಓಮ್ನಿ ಬ್ರಿಡ್ಜ್ ಟೆಕ್ನಾಲಜಿ~ ಎನ್ನುವ ಸಂಸ್ಥೆ `ಸ್ಟಡಿ ಬಡ್ಡಿ~ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. ಬ್ಲ್ಯಾಕ್ ಬೆರಿ ಆ್ಯಪ್ ವರ್ಲ್ಡ್ ಮೂಲಕ ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈಗಾಗಲೇ 5 ಸಾವಿರ ಪ್ರಶ್ನೆಗಳು ವೊಡಾಫೋನ್ ಬಳಕೆದಾರರಿಗೆ ಉಚಿತ ಡೌನ್‌ಲೋಡ್‌ಗೆ ಲಭ್ಯವಿವೆ.

ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್ ಅಡ್ಮಿಷನ್ ಟೆಸ್ಟ್-ಸಿಎಟಿ)  ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್ ಪ್ರವೇಶ ಪರೀಕ್ಷೆಗಳಿಗೆ (ಸಿಎಂಎಟಿ)  ಸಿದ್ಧತೆ ನಡೆಸುತ್ತಿರುವ 2 ಲಕ್ಷ ವಿದ್ಯಾರ್ಥಿಗಳಿಗೆ ಈ ಅಪ್ಲಿಕೇಷನ್ ನೆರವು ನೀಡಲಿದೆ.

ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೂಡ ಲಭ್ಯವಿದೆ~ ಎನ್ನುತ್ತಾರೆ `ಐಎಂಎಸ್~ನ ಕೇರಳ ಮತ್ತು ತಮಿಳುನಾಡು ವ್ಯವಹಾರಗಳ ಮುಖ್ಯಸ್ಥ ಸರಿತ್ ನಾಯರ್.

ತಮಿಳುನಾಡಿನಲ್ಲಿ ಈಗಾಗಲೇ 1.25 ಲಕ್ಷ ಗ್ರಾಹಕರು ಈ ಸೇವೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಸದ್ಯ ಈ ಸೇವೆ ತಮಿಳುನಾಡಿನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಉಳಿದ ರಾಜ್ಯಗಳಿಗೂ ವಿಸ್ತರಿಸುವ ಕುರಿತು ವೊಡಾಫೋನ್ ಚಿಂತಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT