ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಬ್: ಭಾರತದಲ್ಲಿ ಸಂಶೋಧನಾ ಘಟಕ?

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವೀಡನ್ ಮೂಲದ ರಕ್ಷಣಾ ಉದ್ಯಮ ಸಂಸ್ಥೆ ‘ಸ್ಯಾಬ್’ ಭಾರತದಲ್ಲಿ ಏರೊಸ್ಪೇಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಪ್ರಾರಂಭಿಸಲಿದ್ದು, ಹಿಂದೂಸ್ತಾನ್ ಏರೊನಾಟಿಕ್ಸ್ (ಎಚ್‌ಎಎಲ್) ಜತೆಗೆ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ಜಂಟಿ ಒಪ್ಪಂದ ಪ್ರಕಟಿಸಿದೆ. 

 ‘ಹಲವು ಸುಧಾರಿತ  ವೈಮಾನಿಕ ತಂತ್ರಜ್ಞಾನಗಳನ್ನು ಭಾರತಕ್ಕೆ ನೀಡಲು ಸಿದ್ದ್ಧರಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ  ಮುಂದಿನ ತಲೆಮಾರಿನ ಯುದ್ಧ ವಿಮಾನಗಳ ವಿನ್ಯಾಸ ಹಾಗೂ ಅಭಿವೃದ್ಧಿ ಘಟಕವನ್ನು  ಪ್ರಾರಂಭಿಸುವ ಯೋಜನೆ  ಇದ್ದು, ಇದಕ್ಕಾಗಿ 300ಕ್ಕೂ ಹೆಚ್ಚು ಭಾರತೀಯ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಾಗುವುದು’ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಸ್ಯಾಬ್’ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಹಕನ್ ಬುಷ್ಕೆ ಹೇಳಿದರು. ಯುದ್ಧ ವಿಮಾನಗಳು, ಕ್ಷಿಪಣಿಗಳು, ರಕ್ಷಣಾ ಸಾಮಗ್ರಿಗಳು, ವಾಣಿಜ್ಯ ಬಳಕೆಯ ವಿಮಾನಗಳು ಸೇರಿದಂತೆ ಆಧುನಿಕ ವಿಮಾನ ವಿನ್ಯಾಸ ತಂತ್ರಜ್ಞಾನವನ್ನು ಭಾರತೀಯ ಕಂಪೆನಿಗಳಿಗೆ  ನೀಡಲು ಸಿದ್ದ್ಧರಿದ್ದೇವೆ. ‘ಎಚ್‌ಎಎಲ್’ ಜತೆಗೆ ದೀರ್ಘಾವಧಿಯ ಜಂಟಿ ಅಭಿವೃದ್ಧಿ ಯೋಜನೆಗೆ ನಾವು ಬದ್ಧರಾಗಿದ್ದೇವೆ ಎಂದು ‘ಸ್ಯಾಬ್’ನ ಏಷ್ಯಾ ಪೆಸಿಫಿಕ್ ವಲಯದ ಮಾರುಕಟ್ಟೆ ವ್ಯವಸ್ಥಾಪಕ  ಜಾನ್ ವಿಡರ್‌ಸ್ಟ್ರಮ್ ಹೇಳಿದರು.

ಭಾರತೀಯ ರಕ್ಷಣಾ ಉದ್ಯಮ ಸಂಸ್ಥೆ ‘ಸಿಐಎಂ’ ಜತೆ ಬೆಂಗಳೂರಿನಲ್ಲಿ ಬೋಯಿಂಗ್ 787 ವಿಮಾನದ ಬಿಡಿಭಾಗಳನ್ನು ತಯಾರಿಸುವ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಲಾಗಿದೆ. ಭಾರತಕ್ಕೆ ಸಂಪೂರ್ಣ ಸುಧಾರಿತ ತಂತ್ರಜ್ಞಾನವನ್ನು ನೀಡುವ ಭರವಸೆ ನೀಡುತ್ತಿದ್ದೇವೆ ಎಂದು ಸ್ವೀಡನ್‌ನ ರಾಜ್ಯ ರಕ್ಷಣಾ ಕಾರ್ಯದರ್ಶಿ ಹಕನ್ ಜೆರ್ವಲ್ ಹೇಳಿದರು. ಭಾರತದೊಂದಿಗೆ ನಡೆಯುವ ರಕ್ಷಣಾ ವಹಿವಾಟುಗಳಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ ಎಂದೂ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT