ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಬಲದಿಂದ ಅಧಿಕಾರಕ್ಕೆ-ಸಿದ್ದರಾಮಯ್ಯ

Last Updated 24 ಡಿಸೆಂಬರ್ 2012, 5:42 IST
ಅಕ್ಷರ ಗಾತ್ರ

ಮುಳಬಾಗಲು: ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಕುರುಡುಮಲೆ ಗ್ರಾಮದ ವಿನಾಯಕ ದೇವರ ದರ್ಶನಕ್ಕೆ ಪಕ್ಷದ ಮುಖಂಡರೊಂದಿಗೆ ಆಗಮಿಸಿದ್ದ ಅವರು ಮಾತನಾಡಿ, ಮುಂದಿನ ಮೂರು ತಿಂಗಳೊಳಗೆ ಚುನಾವಣೆ ಬರಲಿದ್ದು ಪಕ್ಷದ ಹೆಚ್ಚಿನ ಸಂಖ್ಯೆ ಶಾಸಕರು ಆಯ್ಕೆಯಾಗುವರು ಎಂದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಂಥ ಭ್ರಷ್ಟಾಚಾರ ಇನ್ಯಾವ ಅವಧಿಯಲ್ಲೂ ನಡೆದಿಲ್ಲ. ಬಿಜೆಪಿಯಲ್ಲಿರುವಷ್ಟು ಭ್ರಷ್ಟರು ತುಂಬಿರುವ ಪಕ್ಷ ಬೇರೆ ಯಾವುದು ಇಲ್ಲ ಎಂದರು. ಜಾತಿ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ ಅವರ ಕೆಜೆಪಿ ಪಕ್ಷಕ್ಕೆ ಯಾವುದೇ ನೆಲೆ ಸಿಗುವುದಿಲ್ಲ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾತನಾಡಿದರು. ಶಾಸಕ ಅಮರೇಶ್, ವಿ.ಮುನಿಯಪ್ಪ. ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ರಮೇಶ್‌ಕುಮಾರ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಕೋಲಾರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಅಶೋಕ್‌ಕೃಷ್ಣಪ್ಪ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್, ಮುಳಬಾಗಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ತಾಲ್ಲೂಕು ಭೂ ಬ್ಯಾಂಕ್ ಅಧ್ಯಕ್ಷ ನೀಲಕಂಠೇಗೌಡ, ಎನ್.ವೆಂಕಟೇಶಗೌಡ, ಕೆ.ವಿ.ರಾಮಪ್ರಸಾದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವೆಂಕಟರವಣಪ್ಪ, ದಳಸನೂರು ಎಲ್.ಗೋಪಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕರ್ತರ ಪ್ರತಿಭಟನೆ
ಶಾಸಕ ಅಮರೇಶ್‌ಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ರಾಷ್ಟ್ರೀಯ ಹೆದ್ದಾರಿ 4ರ ಕಾಂತರಾಜ ಸರ್ಕಲ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಕುರುಡುಮಲೆ ವಿನಾಯಕ ದೇವಾಲಯಕ್ಕೆ ವಿಶೇಷ ಪೂಜೆಗೆ ಬಸ್‌ನಲ್ಲಿ ತೆರಳುತ್ತಿದ್ದ ಮುಖಂಡರನ್ನು ತಡೆದು, ಅಮರೇಶ್‌ಗೆ ಟಿಕೆಟ್ ತಪ್ಪಿಸಿ, ಪಕ್ಷ ಉಳಿಸಿ ಎಂದು ಆಗ್ರಹಿಸಿದರು.

ಕಾರ್ಯಕರ್ತರು ಶಾಸಕರ ಕಾರ್ಯ ವೈಖರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆ ನಡೆಸಿದ್ದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕರ್ತರು ಮನವಿ ಸಲ್ಲಿಸಿ ಸ್ಥಳದಲ್ಲೇ ಉತ್ತರ ನೀಡುವಂತೆ ಒತ್ತಾಯಿಸಿದಾಗ, ಈ ಕುರಿತು ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸುತ್ತೇವೆ, ಪ್ರತಿಭಟನೆ ಕೈ ಬಿಡಿ ಎಂದರು.

ಪ್ರತಿಭಟನೆ ನೇತೃತ್ವವನ್ನು ಕೆಪಿಸಿಸಿ ಸದಸ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಕೇಂದ್ರ ಜವಳಿ ಮಂಡಳಿ ಸದಸ್ಯ ಆರ್.ಎಸ್.ಕೃಷ್ಣಯ್ಯಶೆಟ್ಟಿ, ಪಕ್ಷದ ಮುಖಂಡರಾದ ಉತ್ತನೂರು ಶ್ರೀನಿವಾಸ್, ಚೌಡೇಗೌಡ, ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಟೌನ್ ಬ್ಲಾಕ್ ಅಧ್ಯಕ್ಷ ಷಾಬಾಜ್‌ಖಾನ್, ತಾಲ್ಲೂಕು ಭೂ ಬ್ಯಾಂಕ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ತಾಲ್ಲೂಕು ಪಂಚಾಯತಿ ಸದಸ್ಯೆ ಬಿ.ಲಕ್ಷ್ಮಿದೇವಮ್ಮ  ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ.ವೆಂಕಟರಮಣಪ್ಪ, ಸೇವಾದಳದ ರಾಜ್ಯ ಮುಖಂಡ ಸಿ.ಎಂ.ವೆಂಕಟರಾಮೇಗೌಡ, ಗುಜ್ಜನಹಳ್ಳಿ ಮಂಜುನಾಥ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ತಾಲ್ಲೂಕು ಭೂ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ವಿ.ಶ್ರೀನಾಥ್, ಕೀಲಾಗಾಣಿ ಶೇಷಪ್ಪ, ಗುಲ್ನಾಜ್ ಬೇಗಂ, ಗೊಲ್ಲಹಳ್ಳಿ ಶ್ರೀನಿವಾಸಗೌಡ, ಮಾರ್ಕೊಂಡಪ್ಪ, ಜಮ್ಮನಹಳ್ಳಿ ಮುನಿಯಪ್ಪ, ಶ್ರೀನಿವಾಸಯ್ಯ, ಕೃಷ್ಣಮೂರ್ತಿ, ಕಗ್ಗನಹಳ್ಳಿ ಶ್ರೀನಿವಾಸ್, ಮುಜಾಮಿಲ್, ಫಯಾಜ್, ಎ.ವಿ.ಶ್ರೀನಿವಾಸ್ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT