ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಗೊಂಡ ಪಡುಬಿದ್ರಿ ಪ್ರವಾಸಿ ಮಂದಿರ

Last Updated 22 ಜೂನ್ 2011, 9:40 IST
ಅಕ್ಷರ ಗಾತ್ರ

ಪಡುಬಿದ್ರಿ: ತ್ಯಾಜ್ಯಗಳಿಂದ ತುಂಬಿಕೊಂಡಿದ್ದ ಪಡುಬಿದ್ರಿ ಪ್ರವಾಸಿ ಮಂದಿರವನ್ನು ಸ್ವಚ್ಛಗೊಳಿಸಲಾಗಿದೆ.
ಸರ್ಕಾರಿ ಅಧಿಕಾರಿಗಳಿಗೆ ವಿಶ್ರಾಂತಿ ಪಡೆಯಲು ನಿರ್ಮಿಸಿದ್ದ ಪಡುಬಿದ್ರಿಯ ಪ್ರವಾಸಿ ಮಂದಿರ ಆವರಣದಲ್ಲಿ ತ್ಯಾಜ್ಯ ರಾಶಿಯ ಬಗ್ಗೆ ಪ್ರಜಾವಾಣಿ ಜೂನ್ 16ರ ಸಂಚಿಕೆಯಲ್ಲಿ `ಅಂದು ಪ್ರವಾಸಿ ಮಂದಿರ; ಇಂದು ತ್ಯಾಜ್ಯ ಸಂಗ್ರಹಗಾರ~ ಎಂಬ ವರದಿ ಪ್ರಕಟಿಸಿತ್ತು.

ಈ ಬಗ್ಗೆ ಸ್ಪಂದಿಸಿದ ಪಡುಬಿದ್ರಿ ಗ್ರಾಪಂ ಪ್ರವಾಸಿ ಮಂದಿರದ ಆವರಣದಲ್ಲಿದ್ದ ತ್ಯಾಜ್ಯಗಳನ್ನು ಉಡುಪಿಯ ಕಸಸಂಗ್ರಹ ಗುತ್ತಿಗೆದಾರರೊಬ್ಬರನ್ನು ಕರೆಸಿ ಸ್ವಚ್ಚಗೊಳಿಸಲಾಯಿತು.

ಸದ್ಯದಲ್ಲೇ ಸಭೆ: ಪ್ರವಾಸಿ ಮಂದಿರದ ಆವರಣದಲ್ಲಿ ಕಸ ಎಸೆಯದಿರಲು ಪಂಚಾಯಿತಿ ನಿರ್ಧರಿಸಿದ್ದು, ಪರಿಸರದ ವ್ಯಾಪಾರಸ್ಥರ ಸಭೆಯೊಂದನ್ನು ಕರೆದು ತ್ಯಾಜ್ಯ ಸಂಗ್ರಹ ಬಗ್ಗ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ತಿಪ್ಪೆಗುಂಡಿ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಿದ್ದು, ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ತಿಪ್ಪೆಗುಂಡಿ ನಿರ್ಮಾಣ ಸಮಸ್ಯೆ ಪರಿಹಾರವಾಗಲಿದೆ ಎಂದು ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT