ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಾಪಾಡಿ; ರೋಗ ದೂರವಿಡಿ

Last Updated 15 ಫೆಬ್ರುವರಿ 2011, 5:15 IST
ಅಕ್ಷರ ಗಾತ್ರ

ಧರ್ಮಪುರ: ‘ತಮ್ಮ ಸುತ್ತಮುತ್ತಲಿನ ಪರಿಸರ  ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿ’ ಎಂದು ತಾ.ಪಂ. ಅಧ್ಯಕ್ಷೆ ಅನುರಾಧಾ ರಾಜಣ್ಣ ಸಲಹೆ ನೀಡಿದರು.
ಸಮೀಪದ ಕಣಜನಹಳ್ಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಚಿತ್ರದುರ್ಗ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಗ್ರಾ.ಪಂ. ಯ ‘ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ’ ಸದಸ್ಯರಿಗೆ ಹಮ್ಮಿಕೊಂಡಿದ್ದ ಆರೋಗ್ಯ ತರಬೇತಿ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸದಸ್ಯರಿಗೆ ತರಬೇತಿ ನೀಡುವುದರಿಂದ ನೈರ್ಮಲ್ಯದ ಬಗ್ಗೆ ಹೆಚ್ಚು ನೈರ್ಮಲ್ಯ ವಾಗಿ ನಾಗರಿಕರಿಗೆ ಸಾಕಷ್ಟು ವಿಚಾರಗಳು ತಿಳಿಯಲಿವೆ. ತಾಲ್ಲೂಕು ಪಂಚಾಯ್ತಿಯಿಂದ ಸಿಗುವ ಸೌಲಭ್ಯಗಳನ್ನು ಪ್ರತಿ ಗ್ರಾಮಕ್ಕೆ ಒದಗಿಸುವುದಾಗಿ ಭರವಸೆ ನೀಡಿದರು.ಸಂಯೋಜಕ ಶ್ರೀನಿವಾಸ್ ತರಬೇತಿ ನೀಡಿದರು.ಹರಿಯಬ್ಬೆ ಗ್ರಾ.ಪಂ. ಉಪಾಧ್ಯಕ್ಷೆ ಜಗನ್ಮಾತೆ, ಸದಸ್ಯ ರಾಜಣ್ಣ, ಸವಿತಾಮೂರ್ತಿ, ರಾಮಾಂಜನೇಯ, ನಾಗರಾಜು, ಕೃಷ್ಣಮೂರ್ತಿ, ಗೌರಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT