ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ, ಹಿಂದುತ್ವ ನಿರ್ಲಕ್ಷ್ಯ-ವಿಷಾದ

Last Updated 17 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಯಲಬುರ್ಗಾ: ದೇಶಕ್ಕಾಗಿ ಹುತಾತ್ಮರಾದ ದೇಶಭಕ್ತರನ್ನು ಮರೆಯುವ ಮೂಲಕ ತಮ್ಮತನವನ್ನು ಕಳೆದುಕೊಳ್ಳುತ್ತಿರುವ ಭಾರತೀಯರು ವಿದೇಶಿ ಸಂಸ್ಕೃತಿಯನ್ನೆ ಮೈಗೂಡಿಕೊಂಡು ಸ್ವದೇಶಿ ಹಾಗೂ ಹಿಂದುತ್ವವನ್ನೆ ನಿರ್ಲಕ್ಷಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಕರ್ನಾಟಕ ಉತ್ತರ ಪ್ರಾಂತದ ಭೌದ್ಧಿಕ ಮುಖ್ಯಸ್ಥ ಕೃಷ್ಣ ಜೋಶಿ ಹೇಳಿದರು.

ಸ್ಥಳೀಯ ಸರ್ಕಾರಿ ಕಿರಿಯ ಮಹಾವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಹುತೇಕ ಯುವಕರು ಈಶ ಸೇವೆಗೆ ಆಸಕ್ತಿ ತೋರಿದಷ್ಟು ದೇಶ ಸೇವೆಗೆ ತೋರದೇ ಇರುವುದು ಆತಂಕಕಾರಿ ಬೆಳವಣಿಗೆ.

ಇಂತಹ ವ್ಯತಿರಿಕ್ತ ಪರಿಣಾಮ ದೇಶ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತೆ ಮಾಡಿವೆ. ಭ್ರಷ್ಟಾಚಾರ, ಭಯೋತ್ಪಾದನೆ, ಅಜ್ಞಾನ, ಮೂಢನಂಬಿಕೆ, ಅನಾಚಾರ ಸೇರಿದಂತೆ ಅನೇಕ ಸಮಸ್ಯೆಗಳು ದೇಶದ ಅಶಾಂತಿಗೆ ಕಾರಣವಾಗಿದ್ದಲ್ಲದೇ ನೆಮ್ಮದಿ ಹಾಗೂ ಅಭಿವೃದ್ಧಿಗೆ ಮಾರಕವಾಗಿವೆ.

ಇಂತಹ ಸಮಸ್ಯೆಗಳ ನಿವಾರಣೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸಂಘ ಪರಿವಾರ ನಿರಂತರವಾಗಿ ಕಾರ್ಯಪ್ರವೃತ್ತಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು. ದೇಶ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ವಿಶೇಷ ಕೊಡುಗೆ ನೀಡುತ್ತಿರುವ ಆರ್‌ಎಸ್‌ಎಸ್ ರಾಷ್ಟ್ರದ ಹಾಗೂ ಭಾರತೀಯ ಪ್ರಜೆಗಳ ಸಂರಕ್ಷಿಸುವ ಮೂಲ ಉದ್ದೇಶ ಹಾಗೂ ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿ ಒಡಮೂಡುವಂತೆ ಮಾಡುವ ಮೂಲಕ ರಾಷ್ಟ್ರೋತ್ಥಾನದ ಸಂಕಲ್ಪದ ಹೊಣೆ ಹೊತ್ತಿದೆ.

ಇಂತಹ ಒಂದು ಸಂಘದ ಕಾರ್ಯಚಟುವಟಿಕೆ ಇನ್ನಿತರ ಸಂಘಟನೆಗಳಿಗೆ ಮಾದರಿಯಾಗಿದೆ. ದೇಶದ ಉಳಿವಿಗಾಗಿ ಸ್ವಯಂ ಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.  ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ವೈವಿಧ್ಯಮಯ ಧರ್ಮಧಾಚರಣೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಠಮಾನ್ಯಗಳು ಮಾಡುವ ಕೆಲಸವನ್ನು ಸಂಘ ಪರಿವಾರದವರು ಮಾಡುತ್ತಿದ್ದಾರೆ.

ದೇಶವನ್ನು ಈಶ್ವರ ಎಂದೇ ಭಾವಿಸಿ ಭಕ್ತಿಯಿಂದ ಗೌರವಿಸುವಂತೆ ಕಾರ್ಯಕರ್ತರನ್ನು ಪ್ರೇರೇಪಿಸುವ ಆರ್‌ಎಸ್‌ಎಸ್ ಸಂಘಟನೆಯಿಂದ ಆತ್ಮವಿಶ್ವಾಸ, ಶಿಸ್ತು ಹಾಗೂ ದೇಶಪ್ರೇಮವನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದರು. 

ಶಿಬಿರಾಧಿಕಾರಿ ವೀರಣ್ಣ ಹುಬ್ಬಳ್ಳಿ ವರದಿ ವಾಚಿಸಿದರು. ಕಾರ್ಯವಾಹಕ ಅಧಿಕಾರಿ ನಾಗರಾಜ ನಾಯಕ್ ಸ್ವಾಗತಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುರೇಶಗೌಡ ಶಿವನಗೌಡರ ವಂದಿಸಿದರು. ಸತ್ಯನಾರಾಯಣ ನಾಯಕ್ ನಿರೂಪಿಸಿದರು. ಪ್ರಾಣೇಶ ಜೋಶಿ, ಮುಕುಂದ ಪೂಜಾರ, ಶ್ರೀನಿಧಿ ಜೋಶಿ, ಶಿವನಗೌಡ, ರಾಮಚಂದ್ರ ದೇಸಾಯಿ, ರಾಘವೇಂದ್ರ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು.

ಇದಕ್ಕು ಮುನ್ನ ಪಟ್ಟಣದ ವಿವಿಧ ಬೀದಿಗಳಲ್ಲಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿ ಪಟ್ಟಣದ ಜನತೆಯಲ್ಲಿ ಜಾಗೃತಿ ಮೂಡಿಸಿದರು. ಅನೇಕ ಓಣಿಗಳಲ್ಲಿ ಸ್ವಯಂ ಪ್ರೇರಿತರಾದ ಜನತೆ ರಂಗೋಲಿ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ್ದು ಕಂಡು ಬಂತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT