ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಸೇವಾ ಸಂಸ್ಥೆಗೆ ಧನ ಸಹಾಯ

Last Updated 1 ಜನವರಿ 2014, 6:32 IST
ಅಕ್ಷರ ಗಾತ್ರ

ಗದಗ: ರಾಜಾರಾಂ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನ , ಕೋಲ್ಕತ್ತಾ ಇವ­ರಿಂದ 2013-–14 ನೇ ಸಾಲಿಗೆ ಸಾರ್ವ­ಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ನೆರವು ಧನ ಸಹಾಯ ಯೋಜನೆ ಅಡಿಯಲ್ಲಿ ಧನ ಸಹಾಯ ಪಡೆಯಲು ಅರ್ಹ ಸ್ವಯಂ ಸೇವ ಸಂಸ್ಥೆಗಳಿಂದ ನಿಗದಿತ ನಮೂ­ನೆಯಲ್ಲಿ ಅರ್ಜಿಗಳನ್ನು ಜ. 15- ರೊಳಗೆ ಸಂಬಂಧಿಸಿದ ಉಪ­ನಿರ್ದೇಶಕರು, ಮುಖ್ಯ ಗ್ರಂಥಾಲಯಾ­ಧಿಕಾರಿಗೆ  ಜಿಲ್ಲಾ, ನಗರ ಕೆಂದ್ರ ಗ್ರಂಥಾ­ಲಯ  ಸಲ್ಲಿಸಲು ಕೋರಲಾಗಿದೆ.

ಸಾರ್ವಜನಿಕ ಗ್ರಂಥಾಲಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಘಟನೆಗಳಿಗೆ,  ಸಂಸ್ಥೆಗಳಿಗೆ ಪುಸ್ತಕಗಳನ್ನು , ಪೀಠೋಪಕರಣಗಳನ್ನು ಹಾಗೂ ಸಲಕರಣೆಗಳನ್ನು ಖರೀದಿಸಲು ಹಾಗೂ ಸದರಿ ಸಂಘಟನೆಯ, ಸಂಸ್ಥೆಯ ಸಲುವಾಗಿ ಗ್ರಂಥಾಲಯ ಕಟ್ಟಡವನ್ನು ಅಭಿವೃದ್ಧಿ ಪಡಿಸಲು ಕೈಗೊಳ್ಳುವ ಹೆಚ್ಚುವರಿ ನಿರ್ಮಾಣ ಸೇರಿದಂತೆ ಕಟ್ಟಡ ಕಾಮಗಾರಿಗಳಿಗೆ ಹಣ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. 

   ಅರ್ಹ ಸ್ವಯಂ ಸೇವಾ ಸಂಸ್ಥೆಗಳವರು ಸಂಬಂಧಪಟ್ಟ ಉಪ­ನಿರ್ದೇಶಕರು, ಮುಖ್ಯ ಗ್ರಂಥಾ­ಲಯಾ­ಧಿಕಾರಿಗಳು, ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯದಿಂದ ನಿಗದಿತ ಅರ್ಜಿ ಪಡೆದು, ಅರ್ಜಿಯಲ್ಲಿನ ಎಲ್ಲಾ ಅಂಶಗಳನ್ನು ಜ.15ರೊಳಗೆ  ಭರ್ತಿ ಮಾಡಿ ಉಪನಿರ್ದೇಶಕರು, ಮುಖ್ಯ ನಿರ್ದೇಶಕರು, ಮುಖ್ಯ ಗ್ರಂಥಾ­ಲಯಾ­ಧಿಕಾರಿಗಳು, ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯ ಇವರಿಗೆ ಸಲ್ಲಿಸ­ಬೇಕು.  

ಯೋಜ­ನೆಯು ಕೇಂದ್ರ ಸರ್ಕಾರದ ನಿಬಂಧನೆಗೆ ಒಳಪಟ್ಟು  ನಿರ್ವಹಣೆ ಆಗುತ್ತಿರುವು­ದರಿಂದ ಅರ್ಜಿ ಮತ್ತು ಸೂಕ್ತ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ಒದಗಿಸುವುದು ಕಡ್ಡಾಯ.   ಹೆಚ್ಚಿನ ವಿವರಗಳು ಬೇಕಾದಲ್ಲಿ ಆಯಾಯ ಜಿಲ್ಲೆಯ ಉಪ­ನಿರ್ದೇಶಕರು, ಮುಖ್ಯ ಗ್ರಂಥಾಲಯಾ­ಧಿಕಾರಿಗಳು, ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯ ಇಲಾಖೆ ಇವರಿಂದ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT