ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣ ಮಂದಿರದ ಟೀಕೆ: ಭಾರತ ಆಕ್ಷೇಪ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪ್ರಸಿದ್ಧ ಟಿ.ವಿ ಕಾರ್ಯಕ್ರಮವೊಂದರಲ್ಲಿ ನಿರೂಪಕರಾದ ಜೇ ಲೆನೊ ಭಾರತದ  ಸ್ವರ್ಣ ಮಂದಿರದ ಬಗ್ಗೆ ಲಘುವಾಗಿ ಮಾತನಾಡಿದ ಬಗ್ಗೆ ಭಾರತ ಬಲವಾಗಿ ಆಕ್ಷೇಪಿಸಿದೆ.

ಎನ್‌ಬಿಸಿ ಚಾನೆಲ್‌ನಲ್ಲಿ ಪ್ರಸಾರ ವಾಗುವ `ದ ಟುನೈಟ್ ಶೋ~ ಕಾರ್ಯಕ್ರಮದಲ್ಲಿ ಲೆನೊ ಅಮೃತಸರದ ಸಿಖ್‌ರ ಪವಿತ್ರ ಸ್ವರ್ಣ ಮಂದಿರದ ದೃಶ್ಯ ತೋರಿಸಿ ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಿಟ್ ರೊಮ್ನೆ ಅವರ ಬೇಸಿಗೆಯ ನಿವಾಸವಾಗಲಿದೆ ಎಂದಿದ್ದರು.

ಭಾನುವಾರ ಇಲ್ಲಿಗೆ ಭೇಟಿ ನೀಡಿದ್ದ ಅನಿವಾಸಿ ಭಾರತೀಯರ ವ್ಯವಹಾರಗಳ ಸಚಿವ ವಯಲಾರ್ ರವಿ ಈ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರುವಂತೆ ಭಾರತದ ಅಮೆರಿಕ ರಾಯಭಾರಿ ನಿರುಪಮಾ ರಾವ್ ಅವರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT