ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಬಂದರೂ ದಕ್ಕದ ಹಕ್ಕು: ವಿಷಾದ

Last Updated 1 ಜೂನ್ 2011, 8:55 IST
ಅಕ್ಷರ ಗಾತ್ರ

ಮುಳಬಾಗಲು: ಸ್ವಾತಂತ್ರ್ಯ ಬಂದು ದಶಕಗಳು ಉರುಳಿದರು ದಲಿತರು ಹಕ್ಕುಗಳಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿರುವುದು  ವಿಷಾದನೀಯ ಎಂದು ದಸಂಸ (ಸಂಯೋಜಕ) ಜಿಲ್ಲಾ ಸಂಚಾಲಕ ಎನ್.ವಿಜಯಕುಮಾರ್ ಹೇಳಿದರು.

ತಾಲ್ಲೂಕಿನ ಕವತನಹಳ್ಳಿ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ  ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಜಯಂತಿ ಹಾಗೂ ಗ್ರಾಮದ ದಸಂಸ (ಸಂಯೋಜಕ) ಶಾಖೆ ಉದ್ಘಾಟಿಸಿ ಮಾತನಾಡಿದರು.

ದಲಿತ ಸಮುದಾಯಗಳು ತಮ್ಮಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತರಾಗಿ ಸರ್ಕಾರದಿಂದ ಬರುವ ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಜಿಲ್ಲಾ ಸಂಘಟನಾ ಸಂಯೋಜಕ ಮೆಕಾನಿಕ್ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಡಿ.ಕೃಷ್ಣಪ್ಪ, ನಾರಾಯಣಗೌಡ, ಡಿ.ರಾಮಕೃಷ್ಣಪ್ಪ, ಕವತನಹಳ್ಳಿ ಗ್ರಾಮ ಶಾಖೆ ಸಂಯೋಜಕ ಕೆ.ಎಸ್.ಬಾಬು, ಸಂಘಟನಾ ಸಂಯೋಜಕ ಪ್ರಸಾದ್, ಶ್ರೀಕಂಠ, ಖಜಾಂಚಿ ಜಿ.ಮಣಿ, ಸಮಿತಿ ಸದಸ್ಯರಾದ ಎನ್.ವೆಂಕಟರಮಣ, ಆರ್.ಗಂಜೇಂದ್ರ  ಮತ್ತಿತರರು ಭಾಗವಹಿಸಿದ್ದರು.

ಕಲಾವಿದ ನರಸಿಂಹ ದೊಮ್ಮಸಂದ್ರ ನರಸಿಂಹ ಶಾಲಾ ಮಕ್ಕಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶನೇಶ್ವರ ಜಯಂತಿ
ಬಾಗೇಪಲ್ಲಿ: ಗಡಿದಂ ಶನಿಮಹಾತ್ಮ ದೇವಾಲಯದಲ್ಲಿ ಶನೇಶ್ವರ ಜಯಂತಿ ಮಂಗಳವಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT