ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯಯೋಧರ ಸ್ಮ ರಣೆ ಅಗತ್ಯ: ಹೊಸಕೇರಿ

Last Updated 11 ಜನವರಿ 2014, 6:26 IST
ಅಕ್ಷರ ಗಾತ್ರ

ಗುಳೇದಗುಡ್ಡ: ದೇಶಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಸ್ವಾತಂತ್ರ್ಯಯೋಧರ ಹಾಗೂ ಹಿರಿಯರ ಪರಂಪರೆಯನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಧಾರವಾಡ, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಬಸವಪ್ರಭು ಹೊಸಕೇರಿ ಅಭಿಪ್ರಾಯಪಟ್ಟರು.

ಶುಕ್ರವಾರ ಭಂಡಾರಿ ಹಾಗೂ ರಾಠಿ ಕಾಲೇಜಿನ ಸಭಾಭವನದಲ್ಲಿ ಸ್ವಾತಂತ್ರ್ಯ­ಯೋಧರು ಹಾಗೂ ಮಾಜಿ ಶಾಸಕ ದಿ. ಮಡಿವಾಳಪ್ಪ ರುದ್ರಪ್ಪ ಪಟ್ಟಣಶೆಟ್ಟಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಆಯೋಜಿಸಿದ್ಧ ವಿಚಾರಗೋಷ್ಠಿಯಲ್ಲಿ ‘ಗಾಂಧೀಜಿ ಪ್ರಸ್ತುತತೆ’ ಕುರಿತು ಅವರು ಮಾತನಾಡಿದರು.

ಮರಡಿಮಠದ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಚಾರ­ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾತಂತ್ರ್ಯಯೋಧರು ಮುದಕಪ್ಪ ಕಲಬುರ್ಗಿ ಅವರು ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಖಂಡ ವಿಜಾಪುರ ಜಿಲ್ಲೆಯ ಪಾತ್ರ’ ಕುರಿತು ಮಾತನಾಡಿದರು.

ಅತಿಥಿಗಳಾಗಿ ಪಿ.ಇ ಟ್ರಸ್ಟ್ ದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ಟದ, ರವೀಂದ್ರ ಪಟ್ಟಣಶೆಟ್ಟಿ. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ನಾಡಗೌಡ ಮಾತನಾಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಈ ಸಂದರ್ಭದಲ್ಲಿ ಬಸವಪ್ರಭು ಹೊಸಕೇರಿ ಅವರನ್ನು ಸನ್ಮಾನಿಸಿದರು.

ಅಂದಾನಪ್ಪ ಅಂಗಡಿ. ಶಂಕರ ಎಲ್. ಸಿಂಗದ, ಅಶೋಕ ಹೆಗಡಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಬಿ. ಎ. ತೆಲಸಂಗ ಸ್ವಾಗತಿಸಿದರು. ನಿವೃತ್ತ ಪ್ರಚಾರ್ಯ ಶಿವಾನಂದ ಎಸ್. ನಾಯನೇಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT