ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಿ ಜ್ಯೋತಿ ಮಹಿಳಾ ಸಂಸ್ಥೆಗೆ ಪ್ರಶಸ್ತಿ

Last Updated 15 ಜನವರಿ 2013, 20:05 IST
ಅಕ್ಷರ ಗಾತ್ರ

ಬೆಂಗಳೂರು:  ಸ್ವಾತಿ ಜ್ಯೋತಿ ಮಹಿಳಾ ಸೌಹಾರ್ದ ವಿವಿಧೋದ್ದೇಶ ಸಹಕಾರಿ ಸಂಸ್ಥೆಗೆ `ನಗರ ಸಮುದಾಯ ಸೂಕ್ಷ್ಮ ಉದ್ಯಮ ಪ್ರಶಸ್ತಿ' ಯು ಲಭಿಸಿದೆ.

ಸಂಸ್ಥೆಯು ಸಮುದಾಯಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ದೆಹಲಿಯಲ್ಲಿ ನಡೆದ `ಸಿಟಿ ಮೈಕ್ರೋ ಎಂಟರ್ ಪ್ರೈಸ್ ಅವಾರ್ಡ್ಸ್' (ಸಿಎಂಇಎ) ಕಾರ್ಯಕ್ರಮದಲ್ಲಿ ಭಾರತದಲ್ಲಿನ ಅಮೆರಿಕದ ರಾಯಭಾರಿ ನ್ಯಾನ್ಸಿ ಜೆ.ಪೊವೆಲ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸಂಸ್ಥೆಯನ್ನು 2007 ರಲ್ಲಿ ಸುಮಾರು ಒಂದು ಸಾವಿರ ಲೈಂಗಿಕ ಕಾರ್ಯಕರ್ತೆಯರು ಒಟ್ಟಾಗಿ ಸ್ಥಾಪಿಸಿದ್ದರು. ಅಂದಿನಿಂದ ಮಹಿಳೆಯರೇ ನಿರ್ವಹಿಸುತ್ತ ಬಂದಿದ್ದಾರೆ.

ಸಂಸ್ಥೆಯು ನಗರದ ಲೈಂಗಿಕ ಕಾರ್ಯಕರ್ತೆಯ ರಿಗೆ ಆರ್ಥಿಕ ಮತ್ತು ಸಾಮಾಜಿಕ ನೆರವನ್ನು ಒದಗಿಸುತ್ತಿದೆ.

ಸಂಸ್ಥೆಯಲ್ಲಿ ಪ್ರಸ್ತುತ 6000 ಕ್ಕೂ ಅಧಿಕ ಸದಸ್ಯರ್ದ್ದಿದಾರೆ. ಅವರಿಗೆ ಹಣಕಾಸು ಸೇವೆಯನ್ನು ಒದಗಿಸಿದ್ದು, ಜೀವ ವಿಮೆ ಮತ್ತು ವೃತ್ತಿ ನೈಪುಣ್ಯತಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

2010-11 ನೇ ಸಾಲಿನಲ್ಲಿ ಸಂಸ್ಥೆಯು ಒಟ್ಟಾರೆ 10 ಲಕ್ಷ ರೂಪಾಯಿ ಆದಾಯವನ್ನು ಪಡೆದಿದ್ದು, 50 ಲಕ್ಷ ರೂಪಾಯಿವರೆಗೂ ಸಾಲ ನೀಡಿದೆ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣನ್ ಮಾತನಾಡಿ, ಈ ಮಹಿಳೆಯರು ಯಾವುದೇ ಆರ್ಥಿಕ ಭದ್ರತೆಯಿಲ್ಲದೆ ಕಷ್ಟಕರ ಜೀವನವನ್ನು ನಡೆಸುತ್ತಿದ್ದರು.

ಈಗ ಅವರ ಹಣಕಾಸು ಸೌಲಭ್ಯವು ಉತ್ತಮವಾಗಿದ್ದು, ಅವರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ಐದು ವರ್ಷಗಳಲ್ಲಿ 12,000 ಮಹಿಳೆಯರಿಗೆ ನೆರವು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT