ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸ್ವಾರ್ಥಿ ರಾಜಕಾರಣಿಗಳನ್ನು ಬಹಿಷ್ಕರಿಸಿ'

Last Updated 9 ಏಪ್ರಿಲ್ 2013, 19:33 IST
ಅಕ್ಷರ ಗಾತ್ರ

ಬೆಂಗಳೂರು: `ಜನಸಾಮಾನ್ಯರ ಸಮಸ್ಯೆಗಳನ್ನು ಬದಿಗೊತ್ತಿ ಶಾಸನ ಸಭೆಯನ್ನು ಸ್ವಹಿತಾಸಕ್ತಿಗೆ ಬಳಸುಕೊಳ್ಳುತ್ತಿರುವ ರಾಜಕಾರಣಿಗಳನ್ನು ಬಹಿಷ್ಕರಿಸುವ ಅಗತ್ಯವಿದೆ' ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡ ಸಂಘರ್ಷ ಸಮಿತಿಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ರಾಜಕೀಯ ಪಕ್ಷಗಳ ನಾಡು-ನುಡಿ ಬದ್ಧತೆ' ಕುರಿತ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಎಲ್ಲ ರಾಜಕೀಯ ಪಕ್ಷಗಳು ನಾಡು ನುಡಿಯ ವಿಚಾರವನ್ನು ಕಡೆಗಣಿಸುತ್ತಿದ್ದು, ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಕಳೆದುಕೊಂಡಿವೆ. ಈಚೆಗೆ ಪಕ್ಷಾಂತರಿಗಳ ಕಾಟ ಹೆಚ್ಚಾಗಿದ್ದು, ಸಿದ್ಧಾಂತಗಳನ್ನು ಗಾಳಿಗೆ ತೂರಲಾಗುತ್ತಿದೆ' ಎಂದರು.    `ನಾನು, ನನ್ನಿಂದಲೇ ಎಂಬ ಅಹಂಕಾರದಿಂದ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ವಿನಾಶಕ್ಕೆ ತಲುಪಿದೆ. ಸ್ವಾರ್ಥಕ್ಕಾಗಿ ಕಟ್ಟಿದ ಕೆಜೆಪಿ ಪಕ್ಷದ ಹೆಸರಿನ ಬಗ್ಗೆಯೇ ಗೊಂದಲಗಳಿವೆ. ಇನ್ನು, ಜನತೆ ಈ ಪಕ್ಷದಿಂದ ರಕ್ಷಣೆಯನ್ನು ನಿರೀಕ್ಷಿಸಬಹುದೇ' ಎಂದು ಪ್ರಶ್ನಿಸಿದ ಅವರು, `ಎಲ್ಲರ ಮೇಲೆ ಟೀಕಾಪ್ರಹಾರ ಮಾಡುತ್ತಿದ್ದ ಸಾಹಿತಿ ಚಂಪಾ ಇಂತಹ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಆಶ್ಚರ್ಯವಾಗಿದೆ ಎಂದು ನೊಂದು ನುಡಿದರು.

ಚಿಂತಕ ಜಿ.ಕೆ.ಗೋವಿಂದರಾವ್, ` ಸಂಘಪರಿವಾರದ ಬೇರುಗಳು ಸಂಪೂರ್ಣವಾಗಿ ನಶಿಸುವಂತೆ ಈ ಬಾರಿ ಚುನಾವಣೆಯಲ್ಲಿ ಜನತೆ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ' ಎಂದು ತಿಳಿಸಿದರು.

ವಿಚಾರವಾದಿ ಪ್ರೊ.ಎನ್.ವಿ.ನರಸಿಂಹಯ್ಯ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT