ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿಗಳಾಗಲು ಮುಂದಾಗಿ: ಕೊಡ್ಗಿ

Last Updated 25 ಜುಲೈ 2012, 5:05 IST
ಅಕ್ಷರ ಗಾತ್ರ

ಹೊಸಪೇಟೆ: ಸರ್ಕಾರ ನೀಡುವ ಅನುದಾನಗಳ ಹೊರತಾಗಿಯೂ ಸ್ಥಳೀಯ ಸಂಸ್ಥೆಗಳು ಸ್ವಾವಲಂಬನೆಯತ್ತ ಯೋಜನೆ ರೂಪಿಸುವುದು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದೆ ಎಂದು 3ನೇ ಹಣಕಾಸು ಆಯೋಗದ ವರದಿ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷ ಎ.ಜಿ.ಕೊಡ್ಗಿ ತಿಳಿಸಿದರು.

ಮಂಗಳವಾರ ಹೊಸಪೇಟೆಯ ತಾಲ್ಲೂಕು ಪಂಚಾಯ್ತಿ ಮತ್ತು ನಗರಸಭೆಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಯೊಂದಿಗೆ ಪ್ರತ್ಯೇಕ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳು ಅನುಭವಿಸುತ್ತಿರುವ ಆರ್ಥಿಕ, ಸಿಬ್ಬಂದಿ ಹಾಗೂ ಕಾರ್ಯಕ್ಷಮತೆಯ ಕೊರತೆಯ ನಡುವೆಯು ಅನೇಕ ಹಂತದಲ್ಲಿ ಸುಧಾರಣೆಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ. ಇಂತಹ ಅಂಶಗಳನ್ನು ಗಮನಿಸಿ ನೀಡಿದ ವರದಿಯ ಹಿನ್ನೆಲೆಯಲ್ಲಿ ಸಾಕಷ್ಟು ಸುಧಾರಣೆಗಳು ಕಂಡರೂ ಅನುಷ್ಠಾನ ಹಂತದಲ್ಲಿಯೂ ರಾಜ್ಯವ್ಯಾಪಿ ಪ್ರವಾಸ ಮಾಡುವ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಲು ಆಗಮಿಸಿದ್ದೆ.

ಈ ಮಧ್ಯೆ ಅಧಿಕಾರಿಗಳಿಗೆ ಅವರ ನಿರ್ಲಕ್ಷಿತ ವಲಯಗಳನ್ನು ಗುರುತಿಸಿ ಮಾಹಿತಿ ನೀಡಲಾಗಿದೆ, ಸುಧಾರಣೆ ಕಾಣದಾದರೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಮತ್ತು ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ನಿಗದಿ ಮಾಡಲು ಸರ್ಕಾರಕ್ಕೆ ತಿಳಿಸಲಾಗುವುದು ಇದರಿಂದ ಹಣ ಬಳಕೆ ಮಾಡದಿರುವ ಪ್ರಕರಣಗಳು, ಅಪಬಳಕೆಗಳು ಕಡೆಮೆಯಾಗಲಿವೆ ಎಂದರು.

ಹೊಸಪೇಟೆ ನಗರಸಭೆ ಆದಾಯ ಮೂಲಗಳನ್ನು ವೃದ್ಧಿಸಲು ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಬಳಕೆ ಮಾಡಿಕೊಂಡಿದ್ದಾದರೆ ತನ್ನ ಆದಾಯವನ್ನು 4ಪಟ್ಟು ವೃದ್ಧಿಸಿಕೊಳ್ಳಬಹುದಾಗಿದೆ. ಹೊಸಪೇಟೆ ಕೇವಲ ನಗರವಾಗಿರದೇ ಐತಿಹಾಸಿಕ ಪ್ರವಾಸಿ ತಾಣ ಹಂಪಿಯ ಪ್ರವೇಶ ದ್ವಾರವಾಗಿದ್ದು  ಸ್ವಚ್ಛತೆ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ವೃದ್ಧಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ತಿಳಿಸ ಲಾಗಿದೆ ಎಂದರು.

ಸರ್ಕಾರದ ವಿವಿಧ ಯೋಜನೆಯ ಅನುದಾನ ಕಳೆದ ಸಾಲಿನಿಂದಲೂ ಬಾಕಿ ಉಳಿದಿದ್ದು ಬಳಕೆಗೆ ಮುಂದಾಗುವಂತೆಯು ತಿಳಿಸಲಾಗಿದೆ ಎಂದರು. ಅಧಿಕಾರಿಗಳ, ಸಿಬ್ಬಂದಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು ಸರ್ಕಾರಕ್ಕೆ ತಿಳಿಸುವುದಾಗಿಯೂ ಹೇಳಿದರು.  

ಕಾರ್ಯಪಡೆಯ ಸದಸ್ಯ ಟಿ.ತಿಮ್ಮೇಗೌಡ, ನಗರಸಭಾ ಅಧ್ಯಕ್ಷ ಎಂ.ಅಮ್ಜದ್, ಉಪ ವಿಭಾಗಾಧಿಕಾರಿ ಡಾ.ಡಿ.ಆರ್. ಅಶೋಕ, ತಹಸೀಲ್ದಾರ ಬಸವರಾಜ ಸೋಮಣ್ಣನವರ್, ಪೌರಾಯುಕ್ತ ಕೆ.ರಂಗಸ್ವಾಮಿ ಸೇರಿದಂತೆ ಸದಸ್ಯರು ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಗಾಯಕ ಮಹಮ್ಮದ್ ರಫಿ ಪುಣ್ಯಸ್ಮರಣೆ 31ರಂದು
ಬಳ್ಳಾರಿ: ಅಖಿಲ ಭಾರತ ಹಜರತ್ ಟಿಪ್ಪು ಸುಲ್ತಾನ್ ಫೆಡರೇಷನ್‌ನ ನಗರ ಘಟಕದ ವತಿಯಿಂದ ಖ್ಯಾತ ಹಿನ್ನೆಲೆ ಗಾಯಕ ದಿ. ಮಹಮ್ಮದ್ ರಫಿ ಅವರ  32ನೇ ಪುಣ್ಯಸ್ಮರಣೆ ಸಮಾರಂಭವನ್ನು ನಗರದ ಹಳೆಯ ಬಸ್ ನಿಲ್ದಾಣದ ಬಳಿಯ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಇದೇ 31ರಂದು ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ.

ಮಹಮ್ಮದ್ ರಫಿ ಅವರ ಅಭಿಮಾನಿಗಳು ಅವರ ಮಧುರ ಕಂಠದಿಂದ ಹೊರಹೊಮ್ಮಿದ ಹಾಡುಗಳನ್ನು ಪ್ರಸ್ತುತಪಡಿಸುವ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವರ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ ಎಂದು ಫೆಡರೇಷನ್‌ನ ನಗರ ಘಟಕದ ಅಧ್ಯಕ್ಷ ಹಾಸೀಂ, ಬುಡೇನ್‌ಸಾಬ್  ತಿಳಿಸಿದ್ದಾರೆ.

ಮಾಹಿತಿಗಾಗಿ ಹಾಸೀಂ (ಮೊಬೈಲ್ ದೂರವಾಣಿ ಸಂಖ್ಯೆ 99456- 79241) ಹಾಗೂ ಬುಡೇನ್‌ಸಾಬ್ (99458- 33752) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT